ಬಂಟ್ವಾಳ

ಫ್ರೆಂಡ್ಸ್ ಪರ್ಲಿಯಾ ತಂಡಕ್ಕೆ ಕಾಂಗ್ರೆಸ್ ಟ್ರೋಫಿ, ಟೀಂ ಭೂಯಾ ರನ್ನರ್ಸ್

ಜಾಹೀರಾತು

ಬಂಟ್ವಾಳ : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಜಾಹೀರಾತು

ಟೂರ್ನಿಯಲ್ಲಿ ಫ್ರೆಂಡ್ಸ್ ಪರ್ಲಿಯಾ ತಂಡ ಚಾಂಪಿಯನ್ ಆಗಿ ಮೂಡಿ ಬಂದು ಕಾಂಗ್ರೆಸ್ ಟ್ರೋಫಿ-2023 ಗೆದ್ದುಕೊಂಡರೆ, ಟೀಂ ಭೂಯಾ ಆಲಡ್ಕ ರನ್ನರ್ಸ್ ಆಗಿ ಮೂಡಿ ಬಂತು. ಫೆಂಡ್ಸ್ ಪರ್ಲಿಯಾ ತಂಡದ ಆಶಿಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಆಸಿಫ್ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಭೂಯಾ ಆಲಡ್ಕ ತಂಡದ ಇಂತಿಯಾಝ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಝಮಾನ್ ಬಾಯ್ಸ್ ಕಲ್ಲಡ್ಕ ಕ್ರಿಕೆಟ್ ತಂಡ ಅತ್ಯಂತ ಶಿಸ್ತಿನ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು.

 

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ,  ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಯುವ ಘಟಕಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿದರು.

ಜಾಹೀರಾತು

 

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಕರೀಂ ಬೊಳ್ಳಾಯಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಬಂಗ್ಲೆಗುಡ್ಡೆ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪಿ ಬಿ, ಎನ್ ಎಸ್ ಯು ಐ ಪದಾಧಿಕಾರಿಗಳಾದ ವಿನಯ್, ನಜೀಬ್ ಮಂಚಿ, ಉದ್ಯಮಿಗಳಾದ ಸಿರಾಜ್ ಮದಕ, ಅಹ್ಮದ್ ಬಾವಾ ಯಾಸೀನ್, ಹಾಜಿ ಬಿ ಎ ಮುಹಮ್ಮದ್ ನೀಮಾ, ಅನ್ಸಾರ್ ಫಾರೆಸ್ಟ್ ಬೋಗೋಡಿ, ಶ್ರೀಮತಿ ಕುಮುದಾ ಜೆ ಕುಡ್ವ, ಪ್ರಮುಖರಾದ ಶಮೀರ್ ನಂದಾವರ, ಪಿ ಬಿ ಶಾಫಿ ಹಾಜಿ ಆಲಡ್ಕ, ಶರೀಫ್ ತೋಟ, ಅಬ್ದುಲ್ ಮುತ್ತಲಿಬ್, ಹಬೀಬ್ ಆಲಡ್ಕ, ಅಶ್ರಫ್ ಉಪ್ಪುಗುಡ್ಡೆ, ಕಬೀರ್ ಬಂಗ್ಲೆಗುಡ್ಡೆ, ಶುಹೈಬ್ ಬೋಳಂಗಡಿ, ಇರ್ಶಾದ್ ಇಚ್ಚ ಬೋಗೋಡಿ, ಜಮಾಲ್ ಬಂಗ್ಲೆಗುಡ್ಡೆ, ಆರಿಫ್, ಹಿಶಾಂ, ಸಜ್ಜಾದ್. ಸಾಬಿತ್, ಮುನೀರ್ ಆಲಡ್ಕ, ಶಾಹಿದ್ ಎಸ್ ಎಸ್ ಮೊದಲಾದವರು ಭಾಗವಹಿಸಿದ್ದರು.

ಜಾಹೀರಾತು

*ಇದೇ ವೇಳೆ ಬಿ ರಮಾನಾಥ ರೈ ಅಭಿಮಾನಿ ಬಳಗದ ಟೀ ಶರ್ಟ್ ಬಿಡುಗಡೆಗೊಳಿಸಲಾಯಿತು. ಸ್ಥಳೀಯ ಉದ್ಯಮಿ, ನರಿಕೊಂಬು ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಅನಾಥಾಶ್ರಮ ನಿರ್ಮಿಸಿ ಅನಾಥರಿಗೆ ಹಾಗೂ ವೃದ್ದರಿಗೆ ಆಶ್ರಯ ಒದಗಿಸುತ್ತಿರುವ ಶ್ರೀಮತಿ ಕುಮುದಾ ಜೆ ಕುಡ್ವ ಅವರನ್ನು ಗೌರವಿಸಲಾಯಿತು*

ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಪ್ರಸ್ತಾವನೆಗೈದರು. ಭೂಯಾ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ ಸ್ವಾಗತಿಸಿ,  ಶಫೀಕ್ ಯು ವಂದಿಸಿದರು, ಪತ್ರಕರ್ತ ಪಿ ಎಂ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

ರಫೀಕ್ ಮೆಜೆಸ್ಟಿಕ್, ರಶೀದ್ ಕತಾರ್, ಹಬೀಬ್ ಆಲಡ್ಕ ತೀರ್ಪುಗಾರರಾಗಿ ಸಹಕರಿಸಿದರೆ, ಸಲಾಲ್ ಗೂಡಿನಬಳಿ ಹಾಗೂ ಸಫಾಝ್ ಗೂಡಿನಬಳಿ ಅಂಕಪಟ್ಟಿ ನಿರ್ವಹಣೆಗೈದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ