ಹೇಳಿದ್ದನ್ನು ಮಾಡಿದ್ದೇನೆ, ಮಾಡಿದ್ದನ್ನೇ ಹೇಳಿದ್ದೇನೆ – ಹೀಗಂದವರು ಮಾಜಿ ಸಚಿವ ಬಿ.ರಮಾನಾಥ ರೈ. ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ವಿಚಾರವನ್ನು ತಿಳಿಸಿ, ಚುನಾವಣೆಯಲ್ಲಿ ವಿಜೇತನಾದರೆ, ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಕುರಿತು ತಿಳಿಸಿದರು. ತನ್ನ ಅವಧಿಯಲ್ಲಾದ ಕಾಮಗಾರಿಗಳ ಕುರಿತು ತಿಳಿಸಿದ ಅವರು, ತಾನು ನಡೆಸಿದ ಕೆಲಸಗಳನ್ನೇ ಮುಂದುವರಿಸಿ, ಹೆಚ್ಚುವರಿ ಅನುದಾನ ನೀಡಿದ ಬಳಿಕ ಕ್ರೆಡಿಟ್ ತೆಗೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು. ತನ್ನ ಅವಧಿಯಲ್ಲಾದ ಸಾಧನೆ ಮತ್ತು ಈಗಿನ ಸಾಧನೆಗಳನ್ನು ಹೋಲಿಸಿಕೊಳ್ಳಿ ಎಂದು ಸವಾಲೆಸೆದರು. ಇದಲ್ಲದೆ, ಮಾರ್ಚ್ 10ರಂದು ಕ್ಷೇತ್ರದ ಎಲ್ಲ ಗ್ರಾಮಗಳಿಗೆ ರಥಯಾತ್ರೆ ಪೊಳಲಿಯಿಂದ ಆರಂಭಗೊಳ್ಳಲಿದ್ದು, ಗ್ರಾಮಗ್ರಾಮಗಳಿಗೆ ಸಂಚರಿಸಲಿದೆ. ಹದಿನಾಲ್ಕು ದಿನಗಳ ಕಾಲ ಇದು ಸಂಚರಿಸುತ್ತದೆ ಎಂದರು.
ಇದರ ವಿಡಿಯೋಗಾಗಿ ಕ್ಲಿಕ್ ಮಾಡಿರಿ
ಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪದ್ಮಶೇಖರ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲಿಯಾನ್, ರಮೇಶ್ ನಾಯಕ್ ರಾಯಿ, ಸುರೇಶ್ ಜೋರಾ, ಜಗದೀಶ ಕೊಯಿಲ, ಜನಾರ್ದನ ಚಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ವೆಂಕಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.