ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಕ್ಷೇತ್ರದ 1706 ಫಲಾನುಭವಿಗಳಿಗೆ ನಾನಾ ಸೌಲಭ್ಯಗಳನ್ನು ವಿತರಿಸಿದರು.
94ಸಿ, 94ಸಿಸಿ ಸಾಗುವಳಿ ಚೀಟಿ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದು, ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಬಂಟ್ವಾಳದ 24,492 ಫಲಾನುಭವಿಗಳಿಗೆ 24.49 ಕೋ.ರೂ. ಹಾಗೂ ಫಸಲು ಭಿಮಾ ಯೋಜನೆಯಲ್ಲಿ 15.07 ಕೋ.ರೂ. ಬಂದಿರುತ್ತದೆ ಎಂದು ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ದ.ಕ.ಜಿಲ್ಲಾಡಳಿತ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಾದ ಪ್ರಗತಿಯ ನೋಟವನ್ನು ತಿಳಿಸಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ತಹಸೀಲ್ದಾರ್ ದಯಾನಂದ ಕೆ.ಎ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಮನಾಥ ರಾಯಿ, ಜಯರಾಮ ನಾಯ್ಕ್ ಕುಂಟ್ರಕಳ, ಗ್ರಾ.ಪಂ.ಗಳ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ, ಸುರೇಶ್ ಬನಾರಿ, ಸಂಜೀವ ಪೂಜಾರಿ, ಹರ್ಷಿಣಿ ಪುಷ್ಪಾನಂದ, ನಾಗವೇಣಿ, ಲೀಲಾವತಿ ಧರ್ಣಪ್ಪ ಪೂಜಾರಿ, ಸುರೇಶ್ ಮೈರಾ, ವಾಮನ ಆಚಾರ್ಯ, ದಿನೇಶ್, ಗಣೇಶ್ ಪೂಜಾರಿ, ಸುಜಾತ ಆರ್.ಪೂಜಾರಿ, ಯಶೋಧ, ಶಶಿಕಲಾ, ಅಭಿಷೇಕ್ ಶೆಟ್ಟಿ, ಶೇಖರ ಪೂಜಾರಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ನವೀನ್‌ಕುಮಾರ್ ಬೆಂಜನಪದವು ಸ್ವಾಗತಿಸಿ, ವಂದಿಸಿದರು.