ಬಂಟ್ವಾಳ ತಾಲೂಕಿನ ಅನಂತಾಡಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹರಿಣಾಕ್ಷ ಗೆಲುವು ಸಾಧಿಸಿದ್ದಾರೆ. ಅನಂತಾಡಿ ಗ್ರಾಪಂ ಎರಡನೇ ವಾರ್ಡ್ ನ ಅಭ್ಯರ್ಥಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ನಡೆದಿತ್ತು.ಅನಂತಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಶಶಿಕಲಾ 254 ಮತ ಗಳಿಸಿದರೆ, ಬಿಜೆಪಿ ಬೆಂಬಲಿತ ತಾಪಂ ಮಾಜಿ ಸದಸ್ಯೆ ಗೀತಾ ಚಂದ್ರಶೇಖರ್ 242 ಮತ ಗಳಿಸಿದ್ದಾರೆ. ಕಳೆದ ಬಾರಿ ಇಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ ಈ ಸಂದರ್ಭ ಮಾತನಾಡಿ, ಹಿಂದೆ ಬಿಜೆಪಿ ಬೆಂಬಲಿತರು ಇಲ್ಲಿ ಗೆದ್ದಿದ್ದು, ಈ ಹಿಂದೆಯೂ ಬಿಜೆಪಿ ಪ್ರಭಾವ ಅನಂತಾಡಿಯಲ್ಲಿತ್ತು. ಇದೀಗ ಕಾಂಗ್ರೆಸ್ ಗೆದ್ದಿರುವುದು ಇತಿಹಾಸ ಸೃಷ್ಟಿಯಾದಂತಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಯಾವಾಗಲೂ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯತ್ ಎಂದು ಹೇಳುತ್ತಿರುತ್ತಾರೆ. ಆದರೆ ಬಿಜೆಪಿಯ ತಾಪಂ ಸದಸ್ಯರು ಗ್ರಾಪಂ ಚುನಾವಣೆಗೆ ನಿಂತೂ ನಮ್ಮ ಬೆಂಬಲಿತ ಅಭ್ಯರ್ಥಿ ಎದುರು ಸೋತಿದ್ದಾರೆ. ನಾವು ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಆ ಸಂತೋಷ ನಮಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲೆಗಟ್ಟಾಗಿ ಬಂಟ್ವಾಳ ಕ್ಷೇತ್ರ ಬೆಳೆಯುತ್ತದೆ ಎಂದು ರೈ ಹೇಳಿದರು. ಪಂಚಾಯತ್ ಒಳಗೆ ಕಾಂಗ್ರೆಸ್ ನ ಧ್ವನಿ ಎತ್ತಲಿದ್ದಾರೆ ಎಂದು ರೈ ಹೇಳಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…