ಪುತ್ತೂರು ತಾಲೂಕು ಉಪ್ಪಿನಂಗಡಿಯ ಮೊಬೈಲ್ ಅಂಗಡಿಯಲ್ಲಿ ನಿಷೇಧಿತ ಇ – ಸಿಗರೇಟ್ ಮಾರಾಟ ಮಾಡುವುದನ್ನು ಪತ್ತೆಹಚ್ಚಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ. ಬಿ.ಎಸ್. ನೇತೃತ್ವದಲ್ಲಿ ದಾಳಿ ನಡೆದಿದ್ದು, ಶೇಖ್ ಶಾಹಿದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿಯಂತೆ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸ್ಬಾ ಗ್ರಾಮದ ಮೊಬೈಲ್ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್ ಎಂಬ ವಸ್ತುವನ್ನು ಮಾರಾಟ ಮಾಡುತ್ತಿದ್ದ ಅಂಗಡಿಗೆ ಹೋದಾಗ 1) DYBVAPOUR 350 PUFFS 5% CUCUMBER ICE ಎಂದು ಬರೆದ ಬಾಕ್ಸ್-1 ಇದರಲ್ಲಿ CUCUMBER ICE ಎಂದು ಬರೆದಿರುವ ಒಟ್ಟು 10 ಇ-ಸಿಗರೇಟ್ ಪೀಸ್ ಗಳು ,2) DYBVAPOUR 350 PUFFS 5% LYCHEE ICE ಎಂದು ಬರೆದ ಬಾಕ್ಸ್-2 ಇದರಲ್ಲಿ LYCHEE ICE ಎಂದು ಬರೆದಿರುವ ತಲಾ 10 ರಂತೆ ಒಟ್ಟು 20 ಇ-ಸಿಗರೇಟ್ ಪೀಸ್ ಗಳು, 3) DYBVAPOUR 350 PUFFS 5% BLUE MINT ಎಂದು ಬರೆದ ಬಾಕ್ಸ್-1 ಇದರಲ್ಲಿ BLUE MINT ಎಂದು ಬರೆದಿರುವ ಒಟ್ಟು 8 ಇ-ಸಿಗರೇಟ್ ಪೀಸ್ ಗಳು, 4) DYBVAPOUR 350 PUFFS 5% BLUE RAZZ ಎಂದು ಬರೆದ ಅರ್ಧ ತೆರೆದ ಬಾಕ್ಸ್-1 ಇದರಲ್ಲಿ BLUE RAZZ ಎಂದು ಬರೆದಿರುವ ಒಟ್ಟು 5 ,ಇ-ಸಿಗರೇಟ್ ಪೀಸ್ ಗಳು, 5) ICED STRAWBERRY ಎಂದು ಬರೆದಿರುವ ಒಟ್ಟು 3 ಇ-ಸಿಗರೇಟ್ ಪೀಸ್ ಗಳು, 6) LUSH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್, 7) PEACH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್ , 8) LYCHEE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್ ಗಳು, 9) TANGERINE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್, 10) CUCUMBER ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್, 11) SOUR APPLE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್ ಪೀಸ್ ಇದ್ದು, ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿರುವುದನ್ನು ಮಹಜರು ಮುಖೇನ ವಶಪಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡ ವಿವಿಧ ಫ್ಲೇವರ್‌ನ ಒಟ್ಟು 52 ನಿಷೇಧಿತ ಇ-ಸಿಗರೇಟ್ ಇದ್ದು, ಇವುಗಳ ಮೌಲ್ಯ ಒಟ್ಟು 26,000/ ಆಗಬಹುದು ಎಂದು ಅಂದಾಜಿಸಲಾಗಿದೆ.