ಬಂಟ್ವಾಳ: ಜೀರ್ಣೋದ್ಧಾರ ಹಂತದಲ್ಲಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ಮೇಲ್ಛಾವಣಿಗೆ ಮರದ ಹೊದಿಕೆಯ ಮುಹೂರ್ತ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಹಾಗೂ ಪುರೋಹಿತ ವಿಜಯಕೃಷ್ಣ ಐತಾಳ್ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಅರ್ಚಕ ಜಯರಾಮ ಕಾರಂತ ಸಹಕರಿಸಿದರು. ಬಳಿಕ ದಾರುಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ಅವರಿಗೆ ಪ್ರಸಾದ ನೀಡಿ ಬಳಿಕ ಮರದ ಹೊದಿಕೆಯ ಕಾರ್ಯ ಪ್ರಾರಂಭಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಮುಖರಾದ ವಿಠಲ್ ಎಂ. ಆರುಮುಡಿ, ಉಮೇಶ್ ಆಳ್ವ ಕೊಟ್ಟುಂಜ, ಕುಸುಮಾಕರ ಶೆಟ್ಟಿ ಕುರ್ಯಾಳ, ರಾಧಾಕೃಷ್ಣ ರೈ ಕೊಟ್ಟುಂಜ, ಪುರುಷೋತ್ತಮ ಪೂಜಾರಿ ಮಜಲು, ಗಿರಿಧರ್ ನಾಯ್ಕ್ ಎಸ್, ಪ್ರಕಾಶ್ಚಂದ್ರ ಆಳ್ವ, ದಯಾವತಿ ಮಠದಬೆಟ್ಟು, ಕೊರಗಪ್ಪ ಗೌಡ ಪಠಣ, ಸುರೇಂದ್ರ ಪೈ ಸರಪಾಡಿ, ರಾಹುಲ್ ಕೋಟ್ಯಾನ್, ಚೇತನ್ ಬಜ, ಕಿಶನ್ ಸರಪಾಡಿ, ನಾರಾಯಣ ದೇವಾಡಿಗ ಹೊಳ್ಳರಗುತ್ತು, ಯೋಗೀಶ್ ಗೌಡ ನೀರೊಲ್ಬೆ, ಗಿರೀಶ್ ನಾಯ್ಕ್ ನೀರಪಲ್ಕೆ, ಆನಂದ ಶೆಟ್ಟಿ ಆರುಮುಡಿ, ಬಾಲಕೃಷ್ಣ ಪೂಜಾರಿ ಕೊಟ್ಟುಂಜ, ನವೀನ್ ಪೂಜಾರಿ ಕೊಡಂಗೆ, ಆನಂದ ಶೆಟ್ಟಿ ಬಾಚಕೆರೆ, ಶಂಕರ ಮೂಲ್ಯ ಮಠದಬೆಟ್ಟು, ಶಿವರಾಮ ಭಂಡಾರಿ, ಚಂದ್ರಶೇಖರ ನಾಯ್ಕ್, ಎಸ್.ಪಿ.ಸರಪಾಡಿ, ಹರೀಶ್ ಮಠದಬೆಟ್ಟು, ದೇವಪ್ಪ ಪೂಜಾರಿ ಹೊಸಮನೆ, ನವೀನ್ ನಾಯ್ಕ್ ಲಕ್ಷ್ಮೀಪಲ್ಕೆ ಮೊದಲಾದವರಿದ್ದರು