ಬಂಟ್ವಾಳ: ಮಾಣಿ ಬಾನೊಟ್ಟು ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಧರ್ಮಜಾಗ್ರತಿ ಅಭಿಯಾನ ಶಿವರಾತ್ರಿ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.
ಮಾಣಿ ಸುತ್ತಮುತ್ತಲಿನ ಕುಣಿತ ಭಜನಾ ತಂಡಗಳು ಭಜನಾ ಸಂಕೀರ್ತನೆಯ ಮೂಲಕ ಜೀರ್ಣೋದ್ಧಾರಗೊಳ್ಳಲಿರುವ ಶಿವಸಾನಿಧ್ಯಕ್ಕೆ ತೆರಳಿ ವಿಶೇಷ ಭಜನೆ ನಡೆಸಲಾಯಿತು.ಶ್ರೀ ವಿನಾಯಕ ಶ್ರೀ ದೇವಿ ಭಜನಾ ಮಂಡಳಿ ಬರಿಮಾರು,
ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇರಳಕಟ್ಟೆ,,ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ಕಲ್ಲೇಟಿ ,ಶ್ರೀ ದೇವಿ ಭಜನಾ ಮಂಡಳಿ ಪೆರಾಜೆ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ,ಮತ್ತು ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಈ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ, ಸದಾಶಿವ ಆಚಾರ್ಯ, ನಾರಾಯಣ ರೈ ಕೊಡಾಜೆ, ನಾರಾಯಣ ಆಳ್ವ ಕೊಡಾಜೆ, ಮಾಣಿ ಗ್ರಾ.ಪಂ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ, ಪಂಚಾಯತ್ ಸದಸ್ಯರಾದ ತೋಟ ನಾರಾಯಣ ಶೆಟ್ಟಿ, ಗಿರಿಯಪ್ಪ ಪೂಜಾರಿ, ದಿನಕರ ನಾಯಕ್ ನೇರಳಕಟ್ಟೆ, ರಾಮಕೃಷ್ಣ ಆಳ್ವ ಕೊಡಾಜೆ, ವೆಂಕಟರಮಣ ಪೈ, ನರಸಿಂಹ ಶೆಟ್ಟಿ , ಭರತ್ ಪೂಜಾರಿ ಕೋಡಿ, ನಿತಿನ್ ಸಾಲ್ಯಾನ್, ವಿಶ್ವಾನಾಥ ಕುಲಾಲ್, ಗಿರೀಶ್ ನಾಯ್ಕ್,, ತೋಟ ಬಾಬು ಶೆಟ್ಟಿ, ಹರೀಶ್ ಮಾಣಿ, ಜನಾರ್ದನ ಪೂಜಾರಿ , ಚಂದ್ರಹಾಸ ಕಲ್ಲೇಟಿ, ಕುಮಾರ್ ಪಿ.ಎಸ್., ನಿರಂಜನ ಭಟ್, ರಘುಪತಿ ನಾಯಕ್ ಮುರುವ ಮೊದಲಾದವರು ಉಪಸ್ಥಿತರಿದ್ದರು ಶಿವಭಕ್ತರು ಮಾಣಿ ಸಂಘಟನೆ ಕಾರ್ಯಕ್ರಮ ಆಯೋಜನೆ ಮಾಡಿತ್ತು