ಬಂಟ್ವಾಳ: ಕಾರಿಂಜ ಕ್ಷೇತ್ರದಲ್ಲಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಈ ವರ್ಷವೂ ಶಿವಮಾಲಾಧಾರಣೆ ನಡೆಯಲಿದೆ. ಮಾಲಾಧಾರಣೆ ಮಾಡಲಿರುವ ಭಕ್ತರು ತಿರುಲೇಶ್ ಬೆಳ್ಳೂರು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಸಂಚಾಲಕರು ಇವರನ್ನು ಸಂಪರ್ಕಿಸ ಬಹುದು.9964339978, ಸಹ ಸಂಚಾಲಕರು ಸಂತೋಷ್ ಸುರ್ವಣನಾಡು:9591659660 ಎಂದು ಮುಖಂಡರು ತಿಳಿಸಿದ್ದಾರೆ.
ಕಳೆದ ವರ್ಷದಿಂದ ಶ್ರೀ ಕ್ಷೇತ್ರದಲ್ಲಿ ಸ್ವಾಮಿಜೀಗಳ ಆಶಿರ್ವಾದಿಂದ ದೇವಸ್ಥಾನದ ಅಡಳಿತ ಮಂಡಲಿ ಸಹಕಾರದಿಂದ ಶಿವ ಮಾಲಾಧಾರಣೆ ಮಾಡುವುದರ ಮೂಲಕ ಶಿವರಾತ್ರಿಯಂದು ಶಿವ ಜಾಗರಣೆ ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ಫೆ.16ರಿಂದ ಶಿವಮಾಲಾಧಾರಣೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ವರ್ಷಕ್ಕಿಂತ ಜಾಸ್ತಿ ಮಂದಿ ಧಾರಣೆ ಮಾಡುವ ನಿರೀಕ್ಷೆ ಇದೆ ಎಂದು ಹಿಂದು ಜಾಗರಣಾ ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ.
ಫೆ.16ರಂದು ಭಕ್ತರು ಮಾಲಾಧಾರಣೆ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ 108 ಬಾರಿ ‘’ಓಂ ನಮಃ ಶಿವಾಯ’’ ಪಂಚಾಕ್ಷರಿ ಮಂತ್ರ ಜಪ ಮಾಡಲಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ವಗ್ಗ ಜಂಕ್ಷನ್ ನಲ್ಲಿ ಮಾಲಾಧಾರಿಗಳೆಲ್ಲರೂ ಒಟ್ಟು ಸೇರುವರು. ಬಳಿಕ ಸಂಕೀರ್ತನಾ ಯಾತ್ರೆ ಮೂಲಕ ದೇವಸ್ಥಾನಕ್ಕೆ ಸಾಗಲಿದ್ದು, ಶುಚಿರ್ಭೂತರಾಗಿ ದೇವರ ದರ್ಶನ ಮಾಡಲಿದ್ದಾರೆ. ಶಿವಜಾಗರಣೆ ಮಾಡಿ, ಬೆಳಗ್ಗೆ ಶಿವಮಾಲೆಯ ವಿಸರ್ಜನೆ ಮಾಡಲಾಗುತ್ತದೆ. ರಾತ್ರಿ ಭಕ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಪುತ್ತೂರು, ಸುಳ್ಯ,ವೇಣೂರು, ಈಶ್ವರಮಂಗಲ,ವಿಟ್ಲ ಭಾಗದಿಂದ ಮಾಲಾಧಾರಿಗಳು ಶಿವ ಜಾಗರಣೆ ಮಾಡಲಿದ್ದಾರೆ ಎಂದು ಹಿಂಜಾವೇ ತಾಲೂಕು ಸಂಚಾಲಕ ತಿರುಲೇಶ್ ಬೆಳ್ಳೂರು ತಿಳಿಸಿದ್ದಾರೆ.