ಬಂಟ್ವಾಳ: ಬಂಟ್ವಾಳ ತಾಲೂಕಿನ ಅಲ್ಲಿಪಾದೆಯಲ್ಲಿ ನೂತನ ಚರ್ಚ್ ಮತ್ತು ಗುರುನಿವಾಸ ಉದ್ಘಾಟನಾ ಸಮಾರಂಭ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ ದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಸಂತ ಅಂತೋನಿಯವರ ದೇವಾಲಯದ ನೂತನ ಕಟ್ಟಡ ಹಾಗೂ ನೂತನ ಗುರು ನಿವಾಸವನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಜನರ ಸಹಕಾರ, ತ್ಯಾಗದ ಪ್ರತೀಕವಾಗಿ ಚರ್ಚ್‌ನ ಧರ್ಮಗುರುಗಳಾದ ವಂ.ಫಾ. ಫ್ರೆಡ್ರಿಕ್ ಮೊಂತೆರೋ ಅವರ ಕನಸಿನಂತೆ ನೂತನ ಚರ್ಚ್ ಕಟ್ಟಡ ಸುಂದರವಾಗಿ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ ಅಲ್ಲಿಪಾದೆ ಭಾಗದ ಅಭಿವೃದ್ಧಿಯಲ್ಲಿ ಚರ್ಚ್‌ನ ಪಾತ್ರವು ಮಹತ್ತರವಾಗಿದೆ ಎಂದರು.
ಕ್ಯಾಲಿಕಟ್ ಧರ್ಮ ಪ್ರಾಂತ್ಯದ ಶ್ರೇಷ್ಠ ಧರ್ಮಗುರುಗಳಾಗಿರುವ ಅತಿ ವಂ.ಮೋನ್ಸಿಂಜೋರ್ ಡಾ. ಜೆನ್ಸನ್ ಪುತ್ತನ್ ವಿತ್ತಿಲ್, ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ಅತೀ. ವಂ. ಫಾ. ವಲೇರಿಯನ್ ಡಿಸೋಜ, ಸಿಸ್ಟರ್ಸ್ ಆಫ್ ಸೈಂಟ್ ಜೋಸೆಫ್ ಕ್ಲೂನಿ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿರುವ ಅತಿ ವಂ. ಧರ್ಮಭಗಿನಿ ಅನ್ನೀಸ್ ಕಲ್ಲರಕಲ್,ಅಲ್ಲಿಪಾದೆ ಕ್ಲೂನಿ ಕಾನ್ವೆಂಟ್ ಸುಪೀರಿಯರ್ ವಂ.ಧರ್ಮಭಗಿನಿ ನರ್ಸಿಜಾ ಸಿಕ್ವೇರಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೊರಾಸ್, ಕಾರ್ಯದರ್ಶಿ ಕಾರ್ಯದರ್ಶಿ ಕಿರಣ್ ನೊರೊನ್ಹಾ, ಸಂಯೋಜಕ ಲಾರೆನ್ಸ್ ಡಿಸೋಜ, ಪ್ರಮುಖರಾದ ಲಿಯೋ ಫೆರ್ನಾಡೀಸ್ ಉಪಸ್ಥಿತರಿದ್ದರು. ಇದೇ ವೇಳೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲಿಪಾದೆ ಚರ್ಚ್‌ನ ಧರ್ಮಗುರು ವಂ.ಫಾ.ಫ್ರೆಡ್ರಿಕ್ ಮೊಂತೇರೊ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೋರಾಸ್ ವಂದಿಸಿದರು, ಫಾ. ರೂಪೇಶ್ ತಾವ್ರೋ ಹಾಗೂ ಮಧುವೆನಸ್ ಮೋರಾಸ್ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…