ಬಂಟ್ವಾಳ: ಅಲ್ಲಿಪಾದೆ ಸಂತ ಅಂತೋನಿಯವರ ದೇವಾಲಯದ ನವೀಕೃತ ಚರ್ಚ್ ಹಾಗೂ ನೂತನ ಗುರುನಿವಾಸ ಉದ್ಘಾಟನೆ ಹಿನ್ನೆಲೆಯಲ್ಲಿ ಭಾನುವಾರ ಹೊರೆಕಾಣಿಕೆ ಅದ್ದೂರಿ ಮೆರವಣಿಗೆ ಮೊಡಂಕಾಪು ಚರ್ಚ್ ವಠಾರದಿಂದ ಬಲೂನು ಹಾರಿಸುವ ಮೂಲಕ ನಡೆಯಿತು.
ಅಗ್ರಾರ್ ಚರ್ಚ್ ಧರ್ಮಗುರು ವಂ.ಫಾ.ಪೀಟರ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಅತಿ ವಂದನೀಯ ಫಾ.ವಲೇರಿಯನ್ ಡಿಸೋಜ ಮುಖ್ಯ ಅತಿಥಿಗಳಾಗಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಸೂರಿಕುಮೇರು ಚರ್ಚ್ ಧರ್ಮಗುರು ವಂ.ಫಾ.ಗ್ರೆಗರಿ ಪಿರೇರ, ಲೊರೆಟ್ಟೊ ಚರ್ಚ್ ಧರ್ಮಗುರು ವಂ.ಫಾ.ಫ್ರಾನ್ಸಿಸ್ ಕ್ರಾಸ್ತಾ, ಅಮ್ಟೂರ್ ಚರ್ಚ್ ಧರ್ಮಗುರು ವಂ.ಫಾ.ಆಲ್ವಿನ್ ಡಿಕುನ್ಹ, ಪಿಡಬ್ಲ್ಯುಪಿಎನ್ ನಿರ್ದೇಶಕ ವಂ.ಫಾ.ರೂಪೇಶ್ ತಾವ್ರೊ, ಸಹಾಯಕ ಧರ್ಮಗುರು ವಂ.ಫಾ.ರಾಹುಲ್ ರಾಹುಲ್ ಡೆಕ್ಸ್ಟರ್ ಡಿಸೋಜ, ಅಲ್ಲಿಪಾದೆ ಧರ್ಮಗುರು ವಂ.ಫಾ. ಫ್ರೆಡ್ರಿಕ್ ಮೊಂತೇರೊ, ಸುಪೀರಿಯರ್ ಕ್ಲೂನಿ ಕಾನ್ವೆಂಟ್ ವಂ.ಭ. ನರ್ಸಿಜಾ ಸಿಕ್ವೇರಾ, ಮಾಜಿ ಸಚಿವ ಬಿ ರಮಾನಾಥ ರೈ, ಪ್ರಮುಖರಾದ ಪಿಯೂಸ್.ಎಲ್ ರೊಡ್ರಿಗಸ್, ಬೇಬಿ ಕುಂದರ್, ನಾವೂರು ಗ್ರಾಪಂ ಅಧ್ಯಕ್ಷ ಉಮೇಶ್ ಕುಲಾಲ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೊರಾಸ್, ಪ್ರಮುಖರಾದ ಕಿರಣ್ ನೊರೊನ್ಹ, ಲಾರೆನ್ಸ್ ಡಿಸೋಜ, ಸುರೇಶ್ ಜೋರಾ ಮತ್ತಿತರರು ಉಪಸ್ಥಿತರಿದ್ದರು. ಹಣ್ಣು ಹಂಪಲು, ತರಕಾರಿ, ಅಕ್ಕಿ ಬೇಳೆಗಳನ್ನು ಹೊತ್ತ ವಾಹನಗಳೊಂದಿಗೆ ಬೈಕ್ ನಲ್ಲಿ ಚರ್ಚ್ ನ ಭಕ್ತರು ಸಾಗಿದರು. ಇದೇ ಸಂದರ್ಭ ಸಂತ ಅಂತೋನಿಯವರ ಕುರಿತ ವಿವರಗಳನ್ನು ಹೇಳುವ ಟ್ಯಾಬ್ಲೊ ಗಮನ ಸೆಳೆಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…