ಬಂಟ್ವಾಳ: ಬಂಟ್ವಾಳದ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್, ಚಿಣ್ಣರಲೋಕ ಸೇವಾಬಂಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಶನಿವಾರ ರಾತ್ರಿ ಚಿಣ್ಣರೋತ್ಸವ 2023 ಎಂಬ 9 ದಿನಗಳ ಚಿಣ್ಣರೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಾಮಾಜಿಕ ಕಾರ್ಯಕರ್ತ, ಚಿಣ್ಣರಲೋಕ ಸೇವಾಬಂಧು ನಿರ್ದೇಶಕ ತೇವು ತಾರಾನಾಥ ಕೊಟ್ಟಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಯೊಂದು ಮಗುವಿಗೆ ವೇದಿಕೆಯ ಜತೆಗೆ ಪ್ರೋತ್ಸಾಹವನ್ನು ನೀಡುವ ಕಾರ್ಯ ಇಂದು ಚಿಣ್ಣರಲೋಕದಿಂದ ಆಗುತ್ತಿದ್ದು, ಆತ್ಮವಿಶ್ವಾಸ ವೃದ್ಧಿಸಲು ಪೂರಕವಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಚಿಣ್ಣರ ಅಧ್ಯಕ್ಷೆ ಸಾನ್ವಿ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಹೋಟೆಲ್ ಉದ್ಯಮಿ ಹಂಝ ಬಸ್ತಿಕೋಡಿ, ಕರಾವಳಿ ಕಲೋತ್ಸವ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಕ್ರಿಯೇಟಿವ್ ಕಾರ್ನರ್ ಅಮ್ಯೂಸ್ ಮೆಂಟ್ ನ ಪ್ರಸಾದ್ ವಿ. ಬೆಂಗಳೂರು, ಚಿಣ್ಣರಲೋಕ ಸೇವಾ ಟ್ರಸ್ಟ್ ನಿರ್ದೇಶಕರಾದ ರಾಜಾ ಚಂಡ್ತಿಮಾರ್, ಇಬ್ರಾಹಿಂ ಕೈಲಾರ್, ನವೀನ್ ಕುಮಾರ್, ಪ್ರಮುಖರಾದ ಪ್ರದೀಪ್ ಕುಮಾರ್ ರಾವ್, ಜಯರಾಮ್ ಎ ಉಪಸ್ಥಿತರಿದ್ದರು. ಚಿಣ್ಣರಲೋಕದ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀನಿಧಿ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಾ ಭಂಡಾರಿಬೆಟ್ಟು ವಂದಿಸಿದರು.