ಬಂಟ್ವಾಳ: ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ-2023 ಕಾರ್ಯಕ್ರಮ ಫೆ. 12 ರಂದು ಮಂಚಿ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಹಿರಿಯ ವಿದ್ಯಾರ್ಥಿ ಸಂಘವನ್ನು ಬಲಪಡಿಸುವ ದೃಷ್ಟಿಯಿಂದ ದೂರದೂರಿನಲ್ಲಿ ನೆಲೆಸಿರುವ ಹಲವಾರು ಹಿರಿಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಕರೆ ತರಬೇಕೆನ್ನುವ ಬಲವಾದ ಉದ್ದೇಶದಿಂದ ಮಂಚಿ ಕೊಳ್ಳಾಡು ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗಾಗಿ ಕ್ರಿಕೆಟ್ , ವಾಲಿಬಾಲ್ , ಹಗ್ಗ ಜಗ್ಗಾಟ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗ, ಜಗ್ಗಾಟ, ಲಕ್ಕಿ ಗೇಮ್ಸ್ ಈ ರೀತಿ ಕ್ರೀಡಾಕೂಟ ಹಾಗೂ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಮಂಚಿ ಕೊಳ್ಳಾಡು ಪ್ರೌಢಶಾಲಾ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪ್ರಧಾನ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಯನ್ ಡಾ. ಎಂ ಗೋಪಾಲಾಚಾರ್ ಮಂಚಿ, ಕಲಾವಿದ ತಾರಾನಾಥ ಕೈರಂಗಳ , ಎಸ್ ಕೃಷ್ಣಪ್ಪ ಸಿಂಗಾರಕೋಡಿ , ನಾಗೇಶ ಸಿ. ಎಚ್. ಇವರಿಗೆ ಗೌರವ ಸನ್ಮಾನ ನಡೆಸಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ರಮಾನಂದ ನೂಜಿಪ್ಪಾಡಿ, ಕೊಳ್ನಾಡು ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ ವಿಟ್ಲ, ಉಮ್ಮರ್ ಕುಂಞ ಸಾಲೆತ್ತೂರು,.ಸುಲೈಮಾನ್ ಜಿ, ಶಿಕ್ಷಕ ತಾರಾನಾಥ ಕೈರಂಗಳ ಮತ್ತಿತರರು ಉಪಸ್ಥಿತರಿದ್ದರು