ಬಂಟ್ವಾಳ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಸಾರಥ್ಯದಲ್ಲಿ ಕೊಳ್ನಾಡು ಬ್ಲಾಕ್ ಸಮಿತಿ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಸಭಾದ್ಯಕ್ಷತೆಯಲ್ಲಿ ಸಾಲೆತ್ತೂರಿನಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ನಡೆಯಿತು. ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮಹಮೂದ್ ಕಡಂಬು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭಾ ಕಾರ್ಯಕ್ರಮದ ಉದ್ಘಾಟನ ಭಾಷಣವನ್ನು ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮೂಲ್ಕಿ- ಮೂಡಬಿದ್ರೆ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಅಲ್ಫಾನ್ಸೋ ಫ್ರಾಂಕೋ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ವಿ ಎಮ್ ಫೈಝಲ್ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಜನರು ಬೇಸತ್ತಿದ್ದಾರೆ. ಕಲ್ಯಾಣ ರಾಜ್ಯದ ಕನಸನ್ನು ಕಂಡಿರುವ ಮತ್ತು ಜನಪರ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಎಸ್ ಡಿ ಪಿ ಐ ಒಂದೇ ಪರ್ಯಾಯವಾಗಿದೆ. ಪಕ್ಷವು ಇಲ್ಯಾಸ್ ಮುಹಮ್ಮದ್ ತುಂಬೆಯವರನ್ನು ಕಣಕ್ಕಿಳಿಸಿದೆ. ಇವರು ಓರ್ವ ದಕ್ಷ ಹಾಗೂ ಪ್ರಾಮಾಣಿಕ ಅಭ್ಯರ್ಥಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್ ಮಾತಾಡಿ ಎಸ್ ಡಿ ಪಿ ಐ ಪಕ್ಷವು ಸ್ವಾಭಿಮಾನ ಇರುವವರ ಪಕ್ಷವಾಗಿದೆ. ಜನತೆಯ ಕಷ್ಟಗಳಿಗೆ ಸ್ಪಂದಿಸುವ ಮತ್ತು ಶೋಷಿತಕ್ಕೊಳಗಾದವರ ಧ್ವನಿಯಾಗಿದೆ. ಸ್ವಾಭಿಮಾನದ ಬದುಕಿಗಾಗಿ ದಲಿತ ಸಹೋದರರು ಎಸ್ ಡಿ ಪಿ ಐ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಬಯಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಯಾದ ಎಸ್ ಡಿ ಪಿ ಐ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಮೂಲಭೂತ ಸೌಕರ್ಯ ಗಳ ಜೊತೆಗೆ ಜನರ ನೈತಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯತ್ತ ಕೂಡ ಎಸ್ ಡಿ ಪಿ ಐ ದೂರದೃಷ್ಟಿಯಿಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಸುಳ್ಳು ಭರವಸೆಗಳನ್ನು ಕೊಟ್ಟು ಜನಸಾಮಾನ್ಯರನ್ನು ವಂಚಿಸಿಕೊಂಡು ಚುನಾವಣೆಯಲ್ಲಿ ಜಯಗಳಿಸಲು ಯತ್ನಿಸುತ್ತಿರುವಾಗ ಇಲ್ಲಿನ ಜನರು ಪ್ರಬುದ್ಧರಾಗಿದ್ದುಕೊಂಡು ಇವರ ವಂಚನೆಗಳಿಗೆ ಬಲಿಯಾಗದೆ ನನ್ನನ್ನು ಈ ಕ್ಷೇತ್ರದಿಂದ ಆಯ್ಕೆ ಮಾಡುವುದರ ಮೂಲಕ ಎಸ್ ಡಿ ಪಿ ಐ ಗೆ ಒಂದು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಇನ್ನಿತರ ವಂಚಿಸುವ ಪಕ್ಷಗಳಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರದ ಚುನಾವಣಾ ಉಸ್ತುವಾರಿ ಶಾಹುಲ್ ಹಮೀದ್ ಎಸ್ ಎಚ್, ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರ್, ಕೊಳ್ನಾಡು ಬ್ಲಾಕ್ ಸಮಿತಿ ಅಧ್ಯಕ್ಷ ಬಶೀರ್ ಕೊಳ್ನಾಡು, ಕಾರ್ಯದರ್ಶಿ ಹೈದರ್ ಆಲಿ ಕಡಂಬು, ವಿಟ್ಲಾ ಪಟ್ಟಣ ಸಮಿತಿ ಕಾರ್ಯದರ್ಶಿ ಮುಸ್ತಾಫ ಒಕ್ಕೆತ್ತೂರು, ಕೊಳ್ನಾಡು ಗ್ರಾಮ ಸಮಿತಿ ಅಧ್ಯಕ್ಷ ಲತೀಫ್ ಎಸ್ ಎನ್ ಮತ್ತು ಇತರ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು. ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.