ಬಂಟ್ವಾಳ

ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ವಿಕಲಚೇತನರಿಗೆ ಶಾಸಕ ರಾಜೇಶ್ ನಾಯ್ಕ್ ಅವರಿಂದ ಸವಲತ್ತು ವಿತರಣೆ

ಬಂಟ್ವಾಳ: ಅನಿರ್ಬಂಧಿತ ಶೇ.5 ರ  ಯೋಜನೆಯಡಿಯಲ್ಲಿ 15.52 ಲಕ್ಷ ರೂ ಮೌಲ್ಯದ ವಿವಿಧ ಸವಲತ್ತುಗಳನ್ನು 78 ವಿಕಲಚೇತನ ಫಲಾನುಭವಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಫೆ.3 ರಂದು ಗುರುವಾರ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಸರಕಾರ ವಿಕಲಚೇತನರಿಗೆ ಗರಿಷ್ಠ ಪ್ರಮಾಣದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದು, ನೇರವಾಗಿ ತಲುಪಿಸುವ ಮೂಲಕ ತನ್ನ ಬದ್ದತೆಯನ್ನು ಮೆರೆದಿದೆ.  ಇಂದು 23 ಶ್ರವಣ ಸಾಧನ, 7 ಗಾಲಿ ಕುರ್ಚಿ, 5 ವಾಟರ್ ಬೆಡ್ , 4   ಹೊಲಿಗೆ ಯಂತ್ರ, ಹಾಗೂ ಇಬ್ಬರಿಗೆ ತಲಾ 2.3 ಲಕ್ಷದ ಕೃತಕ ಕಾಲು ಜೋಡಣೆ ಸೌಲಭ್ಯ ನೀಡಲಾಗಿದೆ ಎಂದರು  ಈ ಸಂದರ್ಭದಲ್ಲಿ ತಾ.ಪಂ.ಇ.ಒ.ರಾಜಣ್ಣ, ಸಿಬ್ಬಂದಿ ಗಳಾದ ಕುಶಾಲಪ್ಪ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts