ವಿಟ್ಲ

ರಾಜ್ಯ ಬಜೆಟ್ ನಲ್ಲಿ ನಾರಾಯಣಗುರು ನಿಗಮ ಘೋಷಣೆ: ಕುಂಡಡ್ಕ ಗುರುನಗರದಲ್ಲಿ ನಡೆದ ಸಮುದಾಯ ಭವನ ಉದ್ಘಾಟನೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಅವರು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು   ಕುಳ ಗ್ರಾಮದ ಬಿಲ್ಲವ ಸಂಘ (ರಿ) ಕುಂಡಡ್ಕ ವತಿಯಿಂದ ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ” ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನನ ನೀಡಿ ಶುಭ ಹಾರೈಸಿದರು.

PHOTO, VIDEO and NEWS by: ಚಿನ್ನಾ ಕಲ್ಲಡ್ಕ

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭಾ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಕಟ್ಟ ಕಡೆಯ  ಮಗುವಿಗೂ ಶಿಕ್ಷಣ ದೊರೆಯಬೇಕು, ಸಮಾಜ ಕಟ್ಟುವಾಗ ಯಾವುದೇ ಯೋಜನೆ ಒಂದೇ ಸಮಾಜಕ್ಕೆ ಸೀಮಿತ ಮಾಡಲು ಆಗಲ್ಲ ಸಾಮೂಹಿಕ ನ್ಯಾಯಕ್ಕೆ ಒತ್ತು  ಕೊಡುವ ಅಗತ್ಯವಿದೆ. ಮುಂದಿನ ಬಜೆಟಿನಲ್ಲಿ ನಾರಾಯಣ ಗುರು ನಿಗಮ ಘೋಷಣೆ ಆಗಲಿದೆ ಎಂದು ತಿಳಿಸಿದರು.

ಕುಂಡಡ್ಕ ಬಿಲ್ಲವ ಸಂಘ (ರಿ).  ಅಧ್ಯಕ್ಷ ದೂಮಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ, ದೈವ ನರ್ತಕ ರಾಮಣ್ಣ ಕುಳ, ಸಭಾಭವನಕ್ಕೆ ಸ್ಥಳ ದಾನಿಗಳಾದ ಸಂಜೀವ ಪೂಜಾರಿ ದಂಪತಿ, ಕಟ್ಟಡ ಸಮಿತಿಯ ಸಂಚಾಲಕ ಯತೀಶ್ ಪೂಜಾರಿ ದಂಪತಿಯನ್ನು ಗೌರವಿಸಲಾಯಿತು

ವೇದಿಕೆಯಲ್ಲಿ ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ, . ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್‌ ಜಿಲ್ಲಾ ಪೂರ್ವ ರಾಜ್ಯಪಾಲ ಲಯನ್ ಡಾ| ಗೀತಪ್ರಕಾಶ್ ಎ,, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ  ಡಾ. ರಾಜಾರಾಮ್ ಕೆ ಬಿ ಉದ್ಯಮಿ ರಾಧಾಕೃಷ್ಣ ಪೈ, ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ  ಕೆ. ಸಂಜೀವ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಚನ್ನಪ್ಪ ಗೌಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಅಧಿಕಾರಿ ಸಚಿನ್ ಕುಮಾರ್ , ಲೋಕೇಶ್ ತಂತ್ರಿಗಳು, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ, ವಿಟ್ಲ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಉದ್ಯಮಿಗಳಾದ  ಕೃಷ್ಣ ಎಂ ಪೂಜಾರಿ, ಸಂತೋಷ್ ಜೀವನ್, ಇಂಜಿನಿಯರ್ ಜಗದೀಶ್ ನಿಂಬಾಳ್ಕರ್‌, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸರಿತಾ, ವಲಯಾಧ್ಯಕ್ಷೆ ಪ್ರಮೀಳಾ ಉಪಸ್ಥಿತರಿದ್ದರು . ಜೀವನ್ ಕೌಶಿಕ್ ಭವಿಷ್ಯ ಪ್ರಾರ್ಥಿಸಿ, ಬಿಲ್ಲದ ಸಂಘ (ರಿ.) ಕುಂಡಡ್ಕ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್‌. ಕೆ., ಸಂಘದ ಪ್ರಾಸ್ತಾವಿಕ ವರದಿಯನ್ನು ವಾಚಿಸಿದರು, ಸಂಘದ ನಿಕಟಪೂರ್ವ ಅಧ್ಯಕ್ಷ ವಿಠಲ ಪೂಜಾರಿ ಕುಂಡಡ್ಕ ಸ್ವಾಗತಿಸಿದರು., ಸಂಘದ ಕೋಶಾಧಿಕಾರಿ ಕೆ ಟಿ ಆನಂದ ಧನ್ಯವಾದವಿತರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು  .

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ