ಸುರತ್ಕಲ್: ವಿವಾಹ ಆಮಂತ್ರಣ ಪತ್ರಿಕೆಯೊಂದು ಬಾಳೆ ಎಲೆ ಮಾದರಿಯಲ್ಲಿರುವುದು ಇದೀಗ ಗಮನ ಸೆಳೆಯುತ್ತಿದೆ. ಪಕ್ಷಿಕೆರೆಯ ಕುಸುಮಾವತಿ ಮತ್ತು ಕಾಂತಪ್ಪ ಬಂಗೇರ ದಂಪತಿ ಪುತ್ರಿ ರಾಜಶ್ರೀ ವಿವಾಹ ಅಶ್ವಿನ್ ಕುಮಾರ್ ಅವರ ಜೊತೆ ಫೆ.10ರಂದು ಸುರತ್ಕಲ್ ತಡಂಬೈಲ್‌ನ ಕುಲಾಲ ಭವನದಲ್ಲಿ ನಡೆಯಲಿದ್ದು, ಇದರ ವಿನ್ಯಾಸ ಬಾಳೆ ಎಲೆಯಂತೆ ಮೂಡಿಬಂದಿರುವುದು ಗಮನಾರ್ಹ. ಇದರೊಂದಿಗೆ ತರಕಾರಿ ಬೀಜಗಳ ಪ್ಯಾಕೆಟ್ ಜತೆಗಿದೆ. ಪಾಕತಜ್ಞರು, ಪುರೋಹಿತರ ಹೆಸರು ಇಲ್ಲಿನ ಪ್ಲಸ್ ಪಾಯಿಂಟ್. ಪ್ಲಾಸ್ಟಿಕ್ ಬಳಕೆ, ಜಾಗೃತಿ ಮೂಡಿಸುವ ಇಂಥ ಆಮಂತ್ರಣ ಪತ್ರಿಕೆಗಳು ಜನರ ಮನಸ್ಸನ್ನು ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತಿವೆ ಎನ್ನುತ್ತಾರೆ ಪರಿಸರವಾದಿ ಪ್ರೊ.ರಾಜಮಣಿ ರಾಮಕುಂಜ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…