ಬಂಟ್ವಾಳ: ಬಂಟ್ವಾಳ ತಾಲೂಕಿನ ಪ್ರಸಿದ್ಧ ದೇವಸ್ಥಾನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ ಶುಕ್ರವಾರ ಬೆಳಗ್ಗೆ 9.18ರ ಮೀನ ಲಗ್ನದಲ್ಲಿ ಅಷ್ಟಬಂಧ ಲೇಪನದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ದೇವಾಡಿಗ ಸಮಾಜದ ವತಿಯಿಂದ ನಿರ್ಮಿಸಲಾದ ನೂತನ ರಥಕ್ಕೆ ಕಲಶಾಭಿಷೇಕ ನೆರವೇರಿಸಿ ಸಮರ್ಪಿಸಲಾಯಿತು.
ಬೆಳಗ್ಗೆ ಗಣಹೋಮ ನಡೆದು ಅಷ್ಟಬಂಧ ಲೇಪನದ ಬಳಿಕ ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಸಾವಿರಾರು ಭಕ್ತರಿಗೆ ಮಹಾಅನ್ನಸಂತರ್ಪಣೆ ನೆರವೇರಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಹೇಶ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಸಂತೋಷ್ ಜಿ.ಶೆಟ್ಟಿ ದಳಂದಿಲ, ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ ಕಾಂತಾಡಿಗುತ್ತು, ರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ, ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಸಜಿಪಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಸೇರಿದಂತೆ ವ್ಯವಸ್ಥಾಪನಾ, ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರಾದ ರಾಮಪ್ರಸಾದ್ ಪೂಂಜ ಬರಂಗರೆ, ಕೆ.ರವೀಂದ್ರ ಕಂಬಳಿ, ಎಂ.ಮಹಾಬಲ ಕೊಟ್ಟಾರಿ, ಸುಧಾಕರ ಆಚಾರ್ಯ ಮಾರ್ನಬೈಲು, ಶ್ರೀಕಾಂತ ಶೆಟ್ಟಿ ಸಂಕೇಶ, ರತ್ನಾಕರ ಪೂಜಾರಿ ನಾಡಾರ್, ಅಶೋಕ್ ಗಟ್ಟಿ ಕಟ್ಲೆಮಾರ್, ಗಿರೀಶ್ ಕುಮಾರ್ ಕುಕ್ಕುದಕಟ್ಟೆ, ಸುರೇಶ ಬಂಗೇರ ಆರ್ಯಾಪು, ಕಿಶನ್ ಶೇಣವ ಅಂಕದಕೋಡಿ, ಎನ್.ಶಿವಶಂಕರ್ ನಂದಾವರ, ಎನ್.ಕೆ.ಶಿವ ಖಂಡಿಗ, ಯಶವಂತ ದೇರಾಜೆಗುತ್ತು, ಅರುಣ್ ಕುಮಾರ್ ಕುಕ್ಕುದಕಟ್ಟೆ, ಗಣೇಶ್ ಕಾರಾಜೆ, ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು, ದಾಮೋದರ ಬಿ.ಎಂ.ಮಾರ್ನಬೈಲ್, ಕವಿತಾ ವಸಂತ್, ಜಯಶ್ರೀ ಅಶೋಕ್ ಗಟ್ಟಿ, ದೇವಪ್ಪ ನಾಯ್ಕ ದಾಸರಗುಡ್ಡೆ, ಎನ್.ಮೋಹನದಾಸ ಹೆಗ್ಡೆ ನಗ್ರಿ, ಎಂ.ಉಮೇಶ್ ಸಜಿಪಮುನ್ನೂರು, ಸಂದೀಪ್ ಕುಮಾರ್ ನಾಗನವಳಚ್ಚಿಲ್, ರೂಪೇಶ್ ಆಚಾರ್ಯ ನಾಗನವಳಚ್ಚಿಲ್, ಸತೀಶ್ ಗೌಡ ನಂದಾವರ, ಲೋಹಿತ್ ಪಣೋಲಿಬೈಲ್, ಎಂ.ಸಚಿನ್ ಮೆಲ್ಕಾರ್, ನವೀನ್ ಸುವರ್ಣ ಮಿತ್ತಕಟ್ಟ, ಕುಶಾಲಪ್ಪ ಅಮ್ಟೂರು, ಜಗದೀಶ್ ಐತಾಳ್, ಕಂದೂರು, ಪ್ರವೀಣ್ ಶೆಟ್ಟಿ ಪರಾರಿಗುತ್ತು, ನಾಗೇಶ್ ಕುಲಾಲ್ ನರಿಕೊಂಬು, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಸಂದೀಪ್ ಸಾಲ್ಯಾನ್ ಸಹಿತ ವಿವಿಧ ಸಮಿತಿಗಳ ಪ್ರಮುಖರು, ಉದ್ಯಮಿ ವಿನಯ್ ಸಿಂಗ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ವ್ಯ ವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ರಾಧಾಕೃಷ್ಣ ಆಳ್ವ ಕಂಚಿಲ ಮತ್ತಿತರರು ಉಪಸ್ಥಿತರಿದ್ದರು