ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದಲ್ಲಿರುವ ಶ್ರೀ ಗುರುಶಿವ ಕ್ಷೇತ್ರದಲ್ಲಿ ಭಜನಾ ಮಂಗಲೋತ್ಸವ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು. ಸಂಜೆ ಭಜನಾ ಮಂಗಲೋತ್ಸವದ ಬಳಿಕ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಂತರ ರಾತ್ರಿ ಉಳ್ಳಾಕುಲು ಅಣ್ಣತಮ್ಮಂದಿರು ಹಾಗೂ ಮಲರಾಯ ದೈವಗಳಿಗೆ ನೇಮ, ಬಳಿಕ ಅಣ್ಣಪ್ಪ ದೈವದ ನೇಮ, ಪಾಷಣಮೂರ್ತಿ, ಕೊರಗಜ್ಜ ಮತ್ತು ಮೈಯೊಂದಿಗೆ ಕೋಲ ನೆರವೇರಿತು. ಈ ಸಂದರ್ಭ ಶ್ರೀ ಗುರುಶಿವ ಕ್ಷೇತ್ರ ಸೇವಾ ಟ್ರಸ್ಟಿನ ಡಾ. ರಾಮಕೃಷ್ಣ ಶೆಟ್ಟಿ ಗೋಳ್ತಮಜಲು ಪುರಂದರ ಶೆಟ್ಟಿ ಗೋಳ್ತಮಜಲು, ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…