ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವಿಟ್ಲದ ವತಿಯಿಂದ ಪೆರ್ನೆ ವಲಯದ. ಶೌರ್ಯವಿಪತ್ತು ನಿರ್ವಹಣಾ ಘಟಕದಿಂದ ಮಂಗಳವಾರ ಕೆದಿಲ ಗ್ರಾಮದ ಎದುರ್ಕಲ ಕಿಂಡಿ ಆಣೆಕಟ್ಟಿನಲ್ಲಿ ಅಡ್ಡವಾಗಿನಿಂತ ಮರ, ಬಿದಿರು, ಕಸಕಡ್ಡಿಗಳನ್ನು ತೆಗೆದು ಸ್ವಚ್ಛಮಾಡಲಾಯಿತು. ಈ ಸಂದರ್ಭ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಜಯಶ್ರೀ,ಸೇವಾಪ್ರತಿನಿಧಿ ಶಾರದಾ, ಜಯಂತಿ, ಶೌರ್ಯ ಪೆರ್ನೆ ಘಟಕದ ಸಂಯೋಜಕಿ ಅಶ್ಮಿತಾ ಮತ್ತು ಪಂಚಾಯಿತ್ ಸದಸ್ಯರಾದ ಶ್ಯಾಮ್ ಪ್ರಸಾದ್ ಮತ್ತು ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…