ಪುಂಜಾಲಕಟ್ಟೆ

ಶಾಸಕ ರಾಜೇಶ್ ನಾಯ್ಕ್ ಪಾದಯಾತ್ರೆ, 11ನೇ ದಿನ: ಪಕ್ಷ ನಾಯಕರು, ಕಾರ್ಯಕರ್ತರೊಂದಿಗೆ ನಡಿಗೆ

ಜಾಹೀರಾತು

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ‌ಅವರ ನೇತ್ರತ್ವದ ಬಂಟ್ವಾಳ ಮಂಡಲ ಬಿಜೆಪಿ ವತಿಯಿಂದ ” ಗ್ರಾಮವಿಕಾಸ ಯಾತ್ರೆ” ” ಗ್ರಾಮದೆಡೆಗೆ ಶಾಸಕರ ನಡಿಗೆ ” 11 ನೇ ದಿನದ ಪಾದಯಾತ್ರೆ ಜ.24 ರಂದು ಕರ್ಪೆ ಕುಪ್ಪೆಟ್ಟು ಬರ್ಕೆ, ಕುಪ್ಪೆಟ್ಟು ಪಂಜುರ್ಲಿ  ಸನ್ನಿದಿಯಿಂದ ಆರಂಭವಾಯಿತು. ಜ.23 ರಂದು  ಕೊಯಿಲದಲ್ಲಿ  ಸಭಾ ಕಾರ್ಯಕ್ರಮ ಸಮಾಪನಗೊಂಡ ಬಳಿಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿಜೆಪಿ ಕಾರ್ಯಕರ್ತೆ ನೀಲ ಪೂಜಾರಿ ಕರ್ಪೆ  ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.   ಇಂದು ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಯಲ್ಲಿ ಕುಪ್ಪೆಟ್ಟು ಬರ್ಕೆ, ಕುಪ್ಪೆಟ್ಟು ಪಂಜುರ್ಲಿ ದೈವಗಳ ಮೂಲಸ್ಥಾನಕ್ಕೆ  ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು .

ಮೂಲಸ್ಥಾನಕ್ಕೆ ಬೇಟಿ ನೀಡಿ ದೈವಗಳಿಗೆ ಪೂಜೆ ಸಲ್ಲಿಸಿದ ಬಳಿಕ ಕರ್ಪೆ ಸಂಗಬೆಟ್ಟು ಭಾಗದಲ್ಲಿ ನಡೆಸಲಾಗಿರುವ  ಅಭಿವೃದ್ಧಿ ಜೊತೆಗೆ ಮೂಲಸ್ಥಾನಕ್ಕೆ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡಿ ಸಹಕಾರ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಮೂಲಸ್ಥಾನದ ಮನೆಯವರು ಹಾಗೂ ಪ್ರಮುಖರಾದ ಉಮೇಶ್ ಪೂಜಾರಿ, ಹರೀಶ್ ಪೂಜಾರಿ, ಜಯಪೂಜಾರಿ, ಕೇಶವ ಪೂಜಾರಿ, ಸಂತೋಷ್ ಪೂಜಾರಿ, ಸುಂದರಿ,ಮುತ್ತು,ಭವಾನಿ, ಸುಮತಿ, ಗಂಗಾದರ ಪೂಜಾರಿ, ಕರಿಯ ಮುಕ್ಕಾಲ್ದಿ, ಬಾಬು ನಲಿಕೆ ಬಿರಾವ್, ನವೀನ್, ಪೂಜಾರಿ, ಸುಭಾಷ್ ಪೂಜಾರಿ , ನವೀನ್ ಪೂಜಾರಿ ಅವರು ಹೂವಿನ ಬೃಹತ್ ಹಾರದ ಜೊತೆಗೆ ಶಾಲು ಹಾಕಿ ಗೌರವಿಸಿದರು. ಅರಳ ಗ್ರಾಮದಲ್ಲಿ ನೂರಾರು ಕಾರ್ಯಕರ್ತರು ಹಣ್ಣು ಹಂಪಲಿನ ಮಾಲೆಯನ್ನು ಹಾಕಿ ಸ್ವಾಗತಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮುಖಂಡರಾದ ದೇವಪ್ಪ ಪೂಜಾರಿ, ದೇವದಾಸ್ ಶೆಟ್ಟಿ, ಡೊಂಬಯ ಅರಳ, ಕಮಲಾಕ್ಷಿ ಪೂಜಾರಿ, ರಮನಾಥ ರಾಯಿ, ಸುದರ್ಶನ್ ಬಜ, ಪ್ರಭಾಕರ ಪ್ರಭು, ರತ್ನಕುಮಾರ್ ಚೌಟ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಸತೀಶ್ ಪೂಜಾರಿ ಅಳಕೆ, ವಸಂತ ಅಣ್ಣಳಿಕೆ, ವಿದ್ಯಾಪ್ರಭು, ಹೇಮಲತಾ, ತೇಜಸ್ ಪೂಜಾರಿ, ನವೀನ್ ಪೂಜಾರಿ, ಚಂದ್ರಶೇಖರ ಪೂವಳ,ರಾಜೇಂದ್ರ ನೆಕ್ಲಾಜೆ, ಹರೀಶ್ ಪೂಜಾರಿ ತಾರಬರಿ, ಭಾಸ್ಕರ್ ಪ್ರಭು, ಕೆ.ನಾರಾಯಣ ನಾಯಕ್, ಹರೀಶ್ ಪೂಜಾರಿ , ಯೋಗಿಶ್ ಪೂಜಾರಿ, ಸದಾನಂದ ಪೂಜಾರಿ ಕರ್ಪೆ, ನೀಲ್ ಕಂಠ ಭಟ್, ದಾಮೋದರ ಪೂಜಾರಿ, ರಶ್ಮಿತ್ ಶೆಟ್ಟಿ, ನಳಿನಿ ಶೆಟ್ಟಿ,  ಉಮೇಶ್ ಅರಳ,  ಸುರೇಶ್ ಕೋಟ್ಯಾನ್, ಧನಂಜಯ‌ ಶೆಟ್ಟಿ, ಗಣೇಶ್ ರೈ ಮಾಣಿ, ಕುಮಾರ್ ಭಟ್ ಕನ್ಯಾನ, ಸಂತೋಷ್ ರಾಯಿಬೆಟ್ಟು,ಸುಪ್ರೀತ್ ಆಳ್ವ, ರೋನಾಲ್ಡ್ ಡಿ.ಸೋಜ, ರಂಜನ್ ಶೆಟ್ಟಿ, ಸುಕುಮಾರ್ ಅಶ್ವಥ್, ಲಕ್ಮೀದರ್ ಶೆಟ್ಟಿ,ನಂದರಾಮ ರೈ, ಜಗದೀಶ್ ಅಳ್ವ, ಯೋಗೀ ಅರಳ, ಚಂದ್ರಶೇಖರ ಶೆಟ್ಟಿ, ಸೀತಾರಾಮ ಪೂಜಾರಿ, ಸದಾಶಿವ ಬರಿಮಾರುಮತ್ತಿತರರು ಉಪಸ್ಥಿತರಿದ್ದರು

odiyoor

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts