ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮವಿಕಾಸ ಯಾತ್ರೆಯ ಸಂದರ್ಭ ರಾಯಿಯಲ್ಲಿ ಸಿದ್ದಕಟ್ಟೆಯಿಂದ ಪಾಣೆಮಂಗಳೂರು ಶ್ರೀ ಅನಂತನಾಥ ಸ್ವಾಮಿ ಬಸದಿಗೆ ವಿಹಾರ ಮಾಡುತ್ತಿದ್ದ ಪ.ಪೂ.೧೦೮ ಮುನಿಶ್ರೀ ವೀರ ಸಾಗರ ಮಹಾರಾಜರನ್ನು ಶಾಸಕರು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರಾಜ್ಯ ನಗರ ನೀರು ಸರಬರಾಜು ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುದರ್ಶನ್ ಬಜ , ರಮನಾಥ ರಾಯಿ, ಪ್ರಕಾಶ್ ಅಂಚನ್, ಶರ್ಮಿತ್ ಜೈನ್, ವೀರೇಂದ್ರ ಜೈನ್, ಸಂತೋಷ್ ಜೈನ್, ಸುಭಾಷ್ ಚಂದ್ರ ಜೈನ್, ವೃಷಭರಾಜ್ ಇಂದ್ರ, ಸುಜಿತ್ ಜೈನ್ ವಾಮದಪದವು, ಮದ್ವರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…