ಬಂಟ್ವಾಳ

ಹೃದಯರೋಗದಿಂದ ಬಳಲುವ ಬಾಲಕನಿಗೆ ಸಜಿಪಮುನ್ನೂರು ಶ್ರೀಶಾರದಾ ಫ್ರೆಂಡ್ಸ್ ಸರ್ಕಲ್ ಮೂಲಕ ನೆರವು

ಬಂಟ್ವಾಳ: ಹೃದಯರೋಗದಿಂದ ಬಳಲುತ್ತಿರುವ ಪುಟ್ಟ ಬಾಲಕ ಲವೀಶ್ ಎಂಬಾತನ ಕುಟುಂಬಸ್ಥರಿಗೆ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ) ವಿದ್ಯಾನಗರ ಸಜಿಪಮುನ್ನೂರು ವತಿಯಿಂದ ದಾನಿಗಳ ಮೂಲಕ ಸಂಗ್ರಹಿಸಿದ 1,09,686 ರೂಗಳನ್ನು ಚಿಕಿತ್ಸೆಗಾಗಿ ಹಸ್ತಾಂತರಿಸಲಾಯಿತು.

ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಸಜೀಪಮುನ್ನೂರು ಇದರ 10ನೇ ಮಾಸಿಕ ತುರ್ತು ನಿಧಿ ಯೋಜನೆಯಂತೆ ಈ ನೆರವು ಕಾರ್ಯ ನಡೆಯಿತು. ಮಗುವಿನ ಚಿಕಿತ್ಸೆಗೆ 7 ಲಕ್ಷ ರೂಗಳ ಅಗತ್ಯತೆಯಿದೆ‌.SRI SHARADA FRIENDS CIRCLE VIDYANAGARA A/C NO:520101009186677 IFSC:UBIN0902004 ಮೂಲಕ ನೆರವನ್ನು ಸಂಘ ಸಂಗ್ರಹಿಸುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ವಿದ್ಯಾನಗರ ಸಜೀಪ ಮಾಗಣೆ ಬಂಡಾರಮನೆ ಪ್ರಥಮ ಪುದ್ವಾರ್ ಮೆಚ್ಚಿ ಜಾತ್ರೆ ಸಂದರ್ಭ ಸಾರ್ವಜನಿಕರಲ್ಲಿ ಹಾಗೂ ಜಾಲತಾಣದಲ್ಲಿ ವಿನಂತಿಸಿಕೊಂಡ ಪ್ರಕಾರ ಸಂಗ್ರಹವಾದ ಹಣ ಹಾಗೂ ಸಜಿಪ ಮಾಗಣೆ ಆಡಳಿತದಾರರು ಕ್ಷೇತ್ರದ ವತಿಯಿಂದ ನೀಡಿದ ಸಹಾಯಧನದ ಚೆಕ್ ಅನ್ನು ಶ್ರೀ ಉಳ್ಳಾಲ್ದಿ ಕ್ಷೇತ್ರದಲ್ಲಿ ಹಸ್ತಾಂತರಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯಭಟ್, ಪ್ರಮುಖರಾದ ಎಸ್ ಶ್ರೀಕಾಂತ್ ಶೆಟ್ಟಿ. ಪ್ರವೀಣ, ಕೇಶವ ಪೂಜಾರಿ, ಗಣೇಶ್ ಅಳ್ವ, ಸುಂದರ ಪೂಜಾರಿ , ದಿವಾಕರ್ ಸಾಲಿಯಾನ್, ನಿತ್ಯಾನಂದ ಪೂಜಾರಿ, ಸಂಘದ ಅಧ್ಯಕ್ಷರು ಕಿರಣ್ ಕುಮಾರ್ ಹಾಗೂ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts