ಗ್ರಾಮ ವಿಕಾಸ ಯಾತ್ರೆಯ 7 ನೇ ದಿನದ ಕಾರ್ಯಕ್ರಮ ಮುಗಿಸಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಣಿನಾಲ್ಕೂರು ಗ್ರಾಮದ ಗುರುವಪ್ಪ ನಾಯ್ಕ ಅವರ ವಾಸ್ತವ್ಯದ ಮನೆಯಲ್ಲಿ ಬೂತ್ ಸಂಖ್ಯೆ 95 ರಲ್ಲಿ ಶನಿವಾರ ಬೆಳಗ್ಗೆ ವಿಜಯ ಸಂಕಲ್ಪ ಅಭಿಯಾನದ ಸದಸ್ಯತ್ವ ನೋಂದಾವಣಾ ಕಾರ್ಯ ನಡೆಸಲಾಯಿತು.
ಶಾಸಕ ರಾಜೇಶ್ ನಾಯ್ಕ್ ರವರು ಸ್ವತಹ ಸದಸ್ಯರಾಗುವ ಮೂಲಕ ಚಾಲನೆ ನೀಡಿ ಇತರರನ್ನು ಸದಸ್ಯರಾಗಿ ನೋಂದಾಯಿಸಲಾಯಿತು. ಈ ಸಂಧರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಸೀತಾರಾಮ ಪೂಜಾರಿ , ಸಾಂತಪ್ಪ ಪೂಜಾರಿ, ಶಶಿಕಾಂತ ಶೆಟ್ಟಿ, ರವೀಂದ್ರಶೆಟ್ಟಿ , ಪ್ರಣಾಮ್ ರಾಜ್,ಅಭಿಲಾಷ್, ಗುರುಪ್ರಸಾದ್,ಕವೀಷ್, ಅಶೋಕ, ಸಂತೋಷ್ , ನಾಗೇಶ್, ರಂಜಿತ್ ನಾಯ್ಕ್, ಸಂಜೀವ, ವಸಂತ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…