ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಎದುರಿನಿಂದ ಶುಕ್ರವಾರ ಬೆಳಗ್ಗೆ ಆರಂಭಗೊಂಡ ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಏಳನೇ ದಿನದ ಪಾದಯಾತ್ರೆಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೆ.ವೇದವ್ಯಾಸ ಕಾಮತ್ ಸಾಥ್ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಶಾಸಕ ರಾಜೇಶ್ ನಾಯ್ಕ್ ಅವರ ಪರಿಣಾಮಕಾರಿ ಯೋಜನೆಗಳಿಂದ ಕ್ಷೇತ್ರ ಅಭಿವೃದ್ಧ ಪಥದಿಂದ ಸಾಗುತ್ತಿದೆ ಎಂದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ಯಾತ್ರೆ ಸಂಚಾಲಕ ದೇವದಾಸ ಶೆಟ್ಟಿ, ಸಹಸಂಚಾಲಕ ಸುದರ್ಶನ ಬಜ, ಮಾಧವ ಮಾವೆ, ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪಕ್ಷ ಪ್ರಮುಖರಾದ ಸುಲೋಚನಾ ಭಟ್, ರಾಮ್ ದಾಸ ಬಂಟ್ವಾಳ, ಉದಯಕುಮಾರ್ ರಾವ್ ಸಹಿತ ವಿವಿಧ ಪ್ರಮುಖರು, ಪುರಸಭೆ, ಗ್ರಾಪಂ ಸದಸ್ಯರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ್ ಶೆಣೈ, ಟ್ರಸ್ಟಿ ಭಾಮಿ ನಾಗೇಂದ್ರನಾಥ್ ಶೆಣೈ, ಉದ್ಯಮಿ ಭಾಮಿ ನಾರಾಯಣ ಶೆಣೈ, ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗ, ಸ್ಥಳೀಯ ಪ್ರಮುಖರಾದ ರವೀಂದ್ರ ಪ್ರಭು, ಗಿರಿಧರ್ ಬಾಳಿಗಾ, ಮಹೇಶ್ ಬಾಳಿಗ, ಗಿರೀಶ್ ಪೈ, ರಮಾನಾಥ ಪೈ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…