ಬಂಟ್ವಾಳ: ಮಾನವ ಬಂದುತ್ವ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಜನವರಿ 24ರಂದು ಬೆಳಗ್ಗೆ 9.30ಕ್ಕೆ ಸಂವಿಧಾನ ಅರಿವಿನ ಹಬ್ಬ ಆಚರಿಸಲಿದೆ.
ಚಿಂತಕ ಡಾ.ಸಿದ್ದನಗೌಡ ಪಾಟೀಲ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಭಾಗೀಯ ಸಂಚಾಲಕ ಕೆ..ಎಸ್. ಸತೀಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದು ಮಡಿಕೇರಿಯ ನ್ಯಾಯವಾದಿ, ಲೇಖಕ ಕೆ.ಆರ್. ವಿದ್ಯಾಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನಡೆಯುವ ಬೆಳಗ್ಗಿನ ಗೋಷ್ಠಿಯಲ್ಲಿ, ದೇಶದ ಆರ್ಥಿಕ ಸ್ಥಿತಿ ಭ್ರಮೆ ಮತ್ತು ವಾಸ್ತವ ಎಂಬ ವಿಷಯವನ್ನು ಶಿಕ್ಷಣ ತಜ್ಞ ಲೇಖಕ ಶ್ರೀಪಾದ ಭಟ್ ಮಂಡಿಸಲಿದ್ದಾರೆ. ಕರಾವಳಿಯ ಸಾಮಾಜಿಕ ಸ್ಥಿತ್ಯಂತರ ಮತ್ತು ತಲ್ಲಣಗಳು ಎಂಬ ವಿಷಯವನ್ನು ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗಡೆ ಉಳೆಪ್ಪಾಡಿ ಮಂಡಿಸಲಿದ್ದಾರೆ.
ಊಟದ ವಿರಾಮದ ನಂತರ ಮಧ್ಯಾಹ್ನ ಎರಡು ಗಂಟೆಗೆ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ, ಭಾರತದ ಬಹುತ್ವದ ಎದುರಿನ ಸವಾಲುಗಳು ಎಂಬ ವಿಷಯದ ಬಗ್ಗೆ ಲೇಖಕ ಸಂಸ್ಕೃತಿ ಚಿಂತಕ ಎಲ್.ಎನ್.ಮುಕುಂದರಾಜ್ ವಿಷಯ ಮಂಡಿಸಲಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ. ಅಸ್ತಿತ್ವದ ಸವಾಲುಗಳು ಬಗ್ಗೆ ಶಿಕ್ಷಣ ತಜ್ಙೆ ಫರ್ಜಾನಾ ಅಶ್ರಫ್ ಮಾತನಾಡಲಿದ್ದಾರೆ. ಅಧ್ಯಕ್ತೆಯನ್ನು ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಹಾಗೂ ಸಂಚಾಲನಾ ಸಮಿತಿಯ ಬಂಟ್ವಾಳ ಸಂಚಾಲಕ ಕೇಶವ ಪೂಜಾರಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.