ಬಂಟ್ವಾಳ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ತಾಲೂಕಿನ ಮಸೀದಿ ಖತೀಬರು ಮತ್ತು ಸದರ್ ಮುಅಲ್ಲಿಮರಿಗೆ ಶೈಕ್ಷಣಿಕ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವು ಮಂಗಳವಾರ ಬಿ.ಸಿ.ರೋಡ್ ನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಎಸ್.ಕೆ.ಜೆ.ಕ್ಯೂ.ಬಂಟ್ವಾಳ ವಲಯ ಅಧ್ಯಕ್ಷ ಸಯ್ಯಿದ್ ಅನಸ್ ಹಾದಿ ತಂಙಳ್ ಅಲ್ ಅಝ್ ಹರಿ ದುಆ ನೆರವೇರಿಸಿದರು. ಎಸ್.ವೈ.ಎಸ್. ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಜಿ.ಎಂ. ಮುಹಮ್ಮದ್ ಖಾಮಿಲ್ ಸಖಾಫಿ ಉದ್ಘಾಟಿಸಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಎಸ್.ಎಸ್.ಎಲ್.ಸಿ ಪರೀಕ್ಷೆ ಮತ್ತು ಉತ್ತಮ ಫಲತಾಂಶ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಮಂಗಳಾ ಕಿಡ್ನಿ ಫೌಂಡೇಶನ್ ತಜ್ಞವೈದ್ಯ ಡಾ. ಮೊಯಿದಿನ್ ನಫ್ಸೀರ್ ಕಿಡ್ನಿ ಸುರಕ್ಷತಾ ಕ್ರಮಗಳ ಮಾಹಿತಿ ನೀಡಿದರು. ಸಂಯುಕ್ತ ಜಮಾಅತ್ ಕಮಿಟಿ ಕೋಶಾಧಿಕಾರಿ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಜೊತೆ ಕಾರ್ಯದರ್ಶಿಗಳಾದ ಕೆ.ಎಸ್. ಮುಹಮ್ಮದ್ ಕಡೇಶ್ವಾಲ್ಯ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಪತ್ರಿಕಾ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಎಸ್. ಮೊಹಮ್ಮದ್ ಸ್ವಾಗತಿಸಿ, ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ವಂದಿಸಿದರು. ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಪ್ರಸ್ತಾವನೆ ಗೈದರು. ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.