ಬಂಟ್ವಾಳ: ಇಲ್ಲಿನ ಅರಳ-ಸಿದ್ಧಕಟ್ಟೆ ಮತ್ತು ಕೊಯಿಲ -ರಾಯಿ ಗ್ರಾಮಗಳನ್ನು ಜನತೆ ಸಂಪರ್ಕಿಸಲು ಅನುಕೂಲವಾಗುವಂತೆ ಕುಗ್ರಾಮದ ರಸ್ತೆಗಳ ಅಭಿವೃದ್ಧಿ ಜೊತೆಗೆ ವಿವಿಧ ಕಿಂಡಿ ಅಣೆಕಟ್ಟೆ ಮತ್ತು ಸೇತುವೆಗಳನ್ನು ನಿರ್ಮಿಸುವ ಮೂಲಕ ರಾಜಕಾರಣಿಗಳಿಂದ ಪಕ್ಷಾತೀತ ಕೊಡುಗೆ ಸಂದಿದೆ ಎಂದು ನೆಕ್ಕರೆಗುಳಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮೇಲ್ವಿಚಾರಕ ದೇವಪ್ಪ ಕರ್ಕೇರ ನೆಕ್ಕರೆಗುಳಿ ಹೇಳಿದ್ದಾರೆ.
ಇಲ್ಲಿನ ಕರ್ಪೆ ಗ್ರಾಮದ ನೆಕ್ಕರೆಗುಳಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನಡೆದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಅವರನ್ನು ಶಾಸಕ ರಾಜೇಶ ನಾಯ್ಕ್ ಸನ್ಮಾನಿಸಿದರೆ, ಶಾಸಕ ರಾಜೇಶ ನಾಯ್ಕ್ ಅವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸುವ ಮೂಲಕ ಗಮನ ಸೆಳೆದರು. ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಅಮ್ಟಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೊಟ್ಯಾನ್, ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಬಿ.ಪದ್ಮಶೆಖರ ಜೈನ್, ಪ್ರಶಾಂತ ಕಾಜವ ಮಿತ್ತಕೋಡಿ, ಎಂ.ಪದ್ಮರಾಜ ಬಲ್ಲಾಳ್, ರಶ್ಮಿತ್ ಶೆಟ್ಟಿ ಕೈತ್ರೋಡಿ, ಸತೀಶ ಪೂಜಾರಿ ಅಳಕೆ, ಜಗದೀಶ ಕೊಯಿಲ, ಸುದರ್ಶನ್ ಬಜ, ರಮಾನಾಥ ರಾಯಿ, ವಾಮನ ಪೂಜಾರಿ, ಗಣನಾಥ ಶೆಟ್ಟಿ, ಸಂತೋಷ್ ಶೆಟ್ಟಿ ಅನಿಯಾಳ, ದಿನೇಶ ಮೈಂದಬೆಟ್ಟು, ಶಿವರಾಮ ಪೂಜಾರಿ, ಸದಾನಂದ ಕುಟ್ಟಿಕಳ ಮತ್ತಿತರರು ಇದ್ದರು. ಸಮಿತಿ ಮೇಲ್ವಿಚಾರಕ ದೇವಪ್ಪ ಕರ್ಕೇರ ಸ್ವಾಗತಿಸಿ, ಪ್ರಕಾಶ ನೆಕ್ಕರೆಗುಳಿ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.