ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಜನವರಿ 29ರಿಂದ ಫೆ.3ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ಬೆಳಗ್ಗೆ 11.12ರ ಮುಹೂರ್ತದಲ್ಲಿ ನಡೆಯಿತು.
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಜನವರಿ 29ರಿಂದ ಫೆ.3ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ಬೆಳಗ್ಗೆ 11.12ರ ಮುಹೂರ್ತದಲ್ಲಿ ನಡೆಯಿತು.
ಸಜಿಪಗುತ್ತುವಿನ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ ಮತ್ತು ಸಜಿಪನಡು ಶ್ರೀ ನಾಲ್ಕೈತ್ತಾಯ ದೈವಸ್ಥಾನದ ಶಂಕರ ಯಾನೆ ಕೋಚ ಪೂಜಾರಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಪ್ರಧಾನ ಅರ್ಚಕ ವೇದಮೂರ್ತಿ ಮಹೇಶ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಈ ಸಂದರ್ಭ ಆಶೀರ್ವದಿಸಿದ ಅವರು, ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂದರ್ಭ ಅನ್ನದಾನಕ್ಕೆ ವಿಶೇಷ ಮಹತ್ವವಿದ್ದು, ಸರ್ವರೂ ಒಟ್ಟಾಗಿ ಉತ್ಸವದ ಸಂದರ್ಭ ಕಾರ್ಯನಿರ್ವಹಿಸಲು ಪ್ರೇರಣೆಯಾಗಲಿ ಎಂದು ಆಶಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ ಕಾಂತಾಡಿಗುತ್ತು, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಹಾಗೂ ಪ್ರಮುಖರಾದ ಯಶವಂತ ದೇರಾಜೆಗುತ್ತು, ಮುಳ್ಳುಂಜ ವೆಂಕಟೇಶ್ವರ ಭಟ್, ಜಯಶಂಕರ ಬಾಸ್ರಿತ್ತಾಯ ಅದ್ರುಕ್ಕು, ಕೃಷ್ಣ ಶ್ಯಾಮ್, ದಾಮೋದರ ಬಿ.ಎಂ. ಮಾರ್ನಬೈಲು, ಲೋಹಿತ್ ಪಣೋಲಿಬೈಲು,ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಜಯಶ್ರೀ ಅಶೋಕ್ ಗಟ್ಟಿ, ಎನ್.ಮೋಹನ್ ದಾಸ ಹೆಗ್ಡೆ ನಗ್ರಿ, ಗಣೇಶ್ ಕಾರಾಜೆ, ಎಂ. ಉಮೇಶ್, ರತ್ನಾಕರ ಪೂಜಾರಿ ನಾಡಾರ್, ಅಶೋಕ್ ಗಟ್ಟಿ, ಸುರೇಶ್ ಬಂಗೇರ, ಗಿರೀಶ್ ಕುಕ್ಕುದಕಟ್ಟೆ, ಶಿವಶಂಕರ್ ನಂದಾವರ, ಎನ್. ಕೆ. ಶಿವ, ಜಗದೀಶ್ ಐತಾಳ್, ಶೈಲೇಶ್ ಪೂಜಾರಿ , ನಾಗೇಶ್ ಕುಲಾಲ್, ಬಿ. ಕೆ. ರಾಜ್, ದಿನೇಶ್ ನಾಯಕ್, ಸುರೇಶ್ ಗಟ್ಟಿ, ವಸಂತ ಪೆರಾಜೆ, ಶೇಖರ ಗಟ್ಟಿ, ರಮೇಶ್ ಕುಲಾಲ್ ಪಣೊಲಿಬೈಲ್, ಸೋಮನಾಥ ಬಿ.ಎಂ., ಚಂದ್ರಶೇಖರ ಕುಲಾಲ್, ರಾಮಕೃಷ್ಣ ಭಂಡಾರಿ, ಗಣೇಶ್ ದೇವಾಡಿಗ, ಭಾಸ್ಕರ್ ಕಂಪದಕೋಡಿ, ಸುರೇಶ್ ಗಟ್ಟಿ, ಯಕ್ಷಿತ್ ಕುಲಾಲ್, ಮನೋಹರ ಶಾಂತಿನಗರ, ಪ್ರಮೀಳಾ ದೇವಾಡಿಗ ಆಶಾ ಪ್ರಕಾಶ್, ಧರ್ಣಪ್ಪ ಸಪಲಿಗ, ಸೀತಾರಾಮ ಅಗೋಳಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.