ಬಂಟ್ವಾಳ: ತಾಲೂಕಿನ ಅಮ್ಟಾಡಿಗ್ರಾಮದ ಕೆಂಪುಗುಡ್ಡೆ ಶ್ರೀ ಬ್ರಹ್ಮ ಮುಗೇರ್ಕಳ ಕೊರಗತನಿಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಪುನರ್ ನವೀಕರಣಕ್ಕೆ ಶಿಲಾನ್ಯಾಸ ಹಾಗೂ ವಿಜ್ಞಾಪನಾ ಪತ್ರದ ಬಿಡುಗಡೆ ಸಮಾರಂಭ ಕ್ಷೇತ್ರದ ವಠಾರದಲ್ಲಿ ಬುಧವಾರ ನಡೆಯಿತು.
ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೈವಸ್ಥಾನದ ಪುನರ್ ನಿರ್ಮಾಣಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
ನಂತರ ಆಶೀರ್ವಚನಗೈದ ಮಾಣಿಲಶ್ರೀಗಳು ತುಳುನಾಡಿನಲ್ಲಿ ಅನಾದಿಕಾಲದಲ್ಲಿ ದೈವರಾಧನೆಗಳು ಅತ್ಯಂತ ಶೃದ್ದಾ ಭಕ್ತಿಯಿಂದ ಮತ್ತು ಪ್ರಭಾವಯುತವಾಗಿ ನಡೆಯುತ್ತಿದ್ದು ಸತ್ಯದ ಮಹಿಮೆಗೆ ಕೊರತೆ ಇರಲಿಲ್ಲ,ವಿದ್ಯೆಯ ಜೊತೆಗೆ ಅನುಭವದ ಪಾಂಡಿತ್ಯವು ಇದ್ದಾಗ ಕೆಲ ದೋಷ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ನುಡಿದರು
ದೈವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಆರಂಭ ಶೂರರಾಗದೆ ಎಲ್ಲರು ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ಯಶಸ್ಸು ಸಿಗುವುದು ಎಂದ ಶ್ರೀಗಳು ಭಗವಂತನ ಸಾಮ್ರಾಜ್ಯದಲ್ಲಿ ಜಾತಿ,ಮತ,ಬೇಧ ಮರೆತು ಎಲ್ಲರು ಸಾಮರಸ್ಯದಿಂದ ಬದುಕಿದಾಗ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ,ದೇವರು,ದೈವಗಳಿಗೆ ಭಕ್ತಿಯ ಸ್ವರೂಪದ ಮಂದಿರ, ಗುಡಿಗಳ ನಿರ್ಮಾಣವಾಗಬೇಕು,ಕರ್ಮದಿಂದ ಮಾತ್ರ ಭಗವಂತನನ್ನು ಕಾಣಬಹುದಾಗಿದೆ ಎಂದರು.
ಲಿಂಗೈಕ್ಯರಾದ ವಿಜಯಪುರದ ಶ್ರೀಸಿದ್ದೇಶ್ವರ ಸ್ವಾಮೀಜಿ ದೇಶಕ್ಕೆ ಮಾದರಿ,ಅಂತಹ ಶ್ರೇಷ್ಠವಾದ ಸಂತರನ್ನು ಕಾಣುವುದೇ ಪಣ್ಯ ಮನಷ್ಯನಿಗೆ ಜ್ಞಾನ ಮತ್ತು ಶಿಕ್ಷಣ ಅವಶ್ಯಕತೆ ಇದ್ದು, ಶಕ್ತಿಗೆ ಯಾವುದೇ ಜಾತಿ ಇಲ್ಲ ಎಂದ ಅವರು ಮಾನವ ಕುಲದ ಮಂದಿರವಾಗಬೇಕು,ಹೃದಯಶ್ರೀಮಂತಿಕೆಯ ಭಕ್ತಿ ನಮ್ಮಲ್ಲಿರಬೇಕು ಎಂದರು.
ಶ್ರೀ ಕ್ಷೇತ್ರ ಗೋಕರ್ಣ ಕ್ಷೇತ್ರದ ಅರ್ಚಕ ಲೋಕೇಶ್ ಶಾಂತಿ ಅವರು ಶಿಲಾನ್ಯಾಸದ ವೈಧಿಕ ವಿಧಿವಿಧಾನವನ್ನು ನೆರವೇರಿಸಿದರು.ರಾಜ್ಯ ಬಂದರು ಮತ್ತುಮೀನಗಾರಿಕಾ ಸಚಿವ ಎಸ್.ಅಂಗಾರ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹಾಜರಿದ್ದು ಶುಭಹಾರೈಸಿದರು.
ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ, ಉಪಾಧ್ಯಕ್ಷ ಸುನೀಲ್ ಕಾಯರ್ ಮಾರ್ , ಸದಸ್ಯೆ ಪೂರ್ಣಿಮ,ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ರೋನಾಲ್ಡ್ ಡಿಸೋಜ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಲೇಖಕ ವಿಜಯ್ ವಿಕ್ರಮ್ ರಾಮಕುಂಜ, ಗುತ್ತಿಗೆದಾರ ಉದಯಕುಮಾರ್ ಕಾಂಜಿಲ ಸಜೀಪ,ಅರಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಮಿತಿ ಅಧ್ಯಕ್ಷ ದೇವಪ್ಪ ಕರ್ಕೆರ,ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್ ಪಡು,ಹಿ.ಜಾ.ವೇ.ಮುಖಂಡ ಜಗದೀಶ್ ನೆತ್ತರಕೆರೆ ಸಮಿತಿಯ ಅಧ್ಯಕ್ಷ ವಿಶ್ವನಾಥ ಕೆಂಪುಗುಡ್ಡೆ,ಲೋಕೇಶ್ ಸುವರ್ಣ ಉಪಸ್ಥಿತರಿದ್ದರು.ಈ ಸಂದರ್ಭಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಾದ ಸೇಸಪ್ಪ ಕೋಟ್ಯಾನ್, ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಪ್ರ.ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ ಸ್ವಾಗತಿಸಿದರು.ದಿನೇಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.