ವಿಟ್ಲ

ಒಡಿಯೂರಿನಲ್ಲಿ ’ತುಳು ಜಾನಪದ ನಲಿಕೆ-ತೆಲಿಕೆ ಪಂತೊ’

ಒಡಿಯೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಜನವರಿ ತಿಂಗಳ 30, ಸೋಮವಾರ ಮತ್ತು 31, ಮಂಗಳವಾರ ’ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ – 23ನೇ ತುಳು ಸಾಹಿತ್ಯ ಸಮ್ಮೇಳನ’ ಜರಗಲಿರುವುದು. ಅದರ ಅಂಗವಾಗಿ ತುಳುನಾಡಿನ ಸಾಂಸ್ಕೃತಿಕ, ಕಲಾ, ನೃತ್ಯತಂಡಗಳಿಗೆ ’ತುಳು ಜಾನಪದ ನಲಿಕೆ-ತೆಲಿಕೆ ಪಂತೊ’ವನ್ನು ಜನವರಿ 30ರಂದು ಸೋಮವಾರ ಮಧ್ಯಾಹ್ನ 1.30ರಿಂದ ಸಂಜೆ 5.30ರ ವರೆಗೆ ಏರ್ಪಡಿಸಲಾಗಿದೆ. ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ತಂಡದ ಹೆಸರು, ಪೂರ್ಣ ವಿಳಾಸ, ನೃತ್ಯದ ವಿವರ, ಕಲಾವಿದರ ಸಂಖ್ಯೆ ಮುಂತಾದ ವಿವರಗಳಿರುವ ಅರ್ಜಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಜನವರಿ 14ಕ್ಕೆ ಮುನ್ನ ತಲಪುವಂತೆ ಕಳಿಸಿಕೊಡಬೇಕು. ವಿಜೇತ ತಂಡಗಳಿಗೆ ಪ್ರಶಸ್ತಿಪತ್ರದೊಂದಿಗೆ ನಗದು ಪ್ರಥಮ 20 ಸಾವಿರ ರೂ, ದ್ವಿತೀಯ 15 ಸಾವಿರ ರೂ ಮತ್ತು  ತೃತೀಯ 10 ಸಾವಿರ ರೂ ಇರಲಿದೆ. ಬಹುಮಾನಗಳನ್ನು ಅದೇ ದಿನ ಸಂಜೆಯ ಸಮಾರಂಭದಲ್ಲಿ ನೀಡಲಾಗುವುದು.

ನಿಬಂಧನೆಗಳು: ತುಳು ಜಾನಪದ ಸಾಂಪ್ರದಾಯಿಕ ನಲಿಕೆ ಕಡ್ಡಾಯ, ತುಳು ಬಾಸೆ-ಸಂಸ್ಕೃತಿದ ಪೊರ್‍ಲು ತಿರ್‍ಲ್ದ ಪ್ರಸ್ತುತಿಗೆ ಅವಕಾಶ., ಪ್ರದರ್ಶನದ ಅವಧಿ 20 ನಿಮಿಷ., ಜಾನಪದ ವಾದ್ಯ ಪರಿಕರಗಳನ್ನೇ ಬಳಸಬೇಕು., ಧ್ವನಿಮುದ್ರಿಕೆ ಬಳಸುವಂತಿಲ್ಲ., ಗುತ್ತಿನ ಮನೆಯ ಅಂಗಳದಲ್ಲಿ ಪ್ರಸ್ತುತಪಡಿಸುವಂತೆ ಪ್ರದರ್ಶನ ನೀಡಬೇಕು., ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು., ಜಾತಿ, ಧರ್ಮ, ದೈವ ನಿಂದನೆಗೆ ಅವಕಾಶವಿಲ್ಲ., ಆಯ್ಕೆಯಾದ ತಂಡಗಳಿಗೆ ಮಾತ್ರ ಸ್ಪರ್ಧೆಗೆ ಅವಕಾಶ. ಸ್ಪರ್ಧೆಯ ವಿಚಾರದಲ್ಲಿ ಸಂಘಟಕರ ನಿರ್ಣಯವು ಅಂತಿಮವಾಗಿರುತ್ತದೆ.

ವಿಳಾಸ: ಸಂಯೋಜಕರು, ’ತುಳು ಜಾನಪದ ನಲಿಕೆ-ತೆಲಿಕೆ ಪಂತೊ’ ತುಳು ಸಾಹಿತ್ಯ ಸಮ್ಮೇಳನ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಅಂಚೆ: ಒಡಿಯೂರು-574243 ಮೊಬೈಲ್: 948076799 ಮತ್ತು 9448123061

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts