ಬಂಟ್ವಾಳ: ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ದಡ್ಡಲಕಾಡು ಚಿಣ್ಣರೋತ್ಸವ ಸಮಾರಂಭ ದಡ್ಡಲಕಾಡು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ರಸ್ಟ್ ಹಾಗೂ ಸರಕಾರಿ ಶಾಲೆ ಉಳಿಸಿ-ಬೆಳೆಸಿ ರಾಜ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಶಾಲಾ ಮೈದಾನದಲ್ಲಿ ನೆರವೇರಿತು.
ಶಾಲೆಯ ಎಲ್ಲಾ 1200 ವಿದ್ಯಾರ್ಥಿಗಳು ಚಿಣ್ಣರೋತ್ಸವದಲ್ಲಿ ಪಾಲ್ಗೊಂಡಿದ್ದು, ಒಂದು ಸಾವಿರ ವಿದ್ಯಾರ್ಥಿಗಳು ದೀಪಗಳನ್ನು ಹಿಡಿದು ದೀಪ ನೃತ್ಯ ಸೇರಿದಂತೆ 17 ಬಗೆಯ ದೇಶಭಕ್ತಿ ಸಾರುವ, ಸಾಹಸಮಯ ನೃತ್ಯಗಳು ಪ್ರದರ್ಶನಗೊಂಡಿತು.
ಶಾಲೆಯ ನೂತನ ಅಕ್ಷರ ದಾಸೋಹ ಕೊಠಡಿಯನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಶುಭ ಹಾರೈಸಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಪಂಜಿಕಲ್ಲು ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಪೂವಪ್ಪ ಮೆಂಡನ್, ಚಿತ್ರಾಕ್ಷಿ, ರೂಪಶ್ರೀ ಲೋಕನಾಥ್, ಆರ್‌ಎಸ್‌ಎಸ್ ಮುಂದಾಳು ವಿನೋದ್ ಕೊಡ್ಮಾಣ್, ಬಂಟ್ವಾಳ ಪಿಎಲ್‌ಡಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಸುದರ್ಶನ್ ಬಜ, ದತ್ತು ಸಂಸ್ಥೆಯ ಟ್ರಸ್ಟಿಗಳಾದ ಶೇಖರ್ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಎಸ್, ಎಸ್‌ಡಿಎಂಸಿ ಉಪಾಧ್ಯಕ್ಷ ಬಾಲಕೃಷ್ಣ ಗೌಡ, ಪ್ರೌಢಶಾಲಾ ಮುಖ್ಯಶಿಕ್ಷಕ ರಮಾನಂದ ನೂಜಿಪ್ಪಾಡಿ ಮೊದಲಾದವರಿದ್ದರು.ರಾಜ್ಯಮಟ್ಟದ ಕಬಡ್ಡಿ ಆಟಗಾರ ಧನುಷ್ ಹಾಗೂ ಎಸೆಸೆಲ್ಸಿಯಲ್ಲಿ 603 ಅಂಕ ಪಡೆದ ವಿದ್ಯಾರ್ಥಿ ಅಖಿಲೇಶ್ ಅವರನ್ನು ಸಮ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು.