ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಕರಿಂಕ ಹೊಸವಕ್ಲು ಕೆ. ಎನ್. ಕೇಶವ ಆಳ್ವ (೭೦) ಸೋಮವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಪತ್ನಿ, ಸರ್ಜನ್ ಡಾ| ಅಶ್ವಿನ್ ಆಳ್ವ ಸಹಿತ ಇಬ್ಬರು ಪುತ್ರರನ್ನು, ಸಹೋದರ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಕೆ.ಎನ್. ಗಂಗಾಧರ ಆಳ್ವ, ಓರ್ವ ಸಹೋದರಿಯನ್ನು ಹೊಂದ್ದರು. 30ಕ್ಕೂ ಅಧಿಕ ವರ್ಷಗಳ ಕಾಲ ವಿಜಯಾ ಬ್ಯಾಂಕ್ನಲ್ಲಿ ಅಧಿಕಾರಿಯಾಗಿ, ಸೀನಿಯರ್ ಮೆನೇಜರ್ ಕರ್ತವ್ಯ ಸಲ್ಲಿಸಿದ್ದರು. ವಿಜಯಾ ಬ್ಯಾಂಕ್ ನೌಕರರ ಯೂನಿಯನ್ ಕೋಶಾಧಿಕಾರಿಯಾಗಿ, ಕರಿಂಕ ಕುಟುಂಬಸ್ಥರ ದೈವ ದೇವರ ಮುಖ್ಯಸ್ಥರಾಗಿ, ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಹಾಗೂ ಶ್ರೀ ದೇವಿ ಬಯಲಾಟ ಸಮಿತಿ ಬಂಟ್ರಿಂಜ ಅನಂತಾಡಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ.