ಶ್ರೀ ಕ್ಷೇತ್ರ ಬರಿಮಾರು ಶ್ರೀ ಮಹಮ್ಮಾಯ ದೇವಸ್ಥಾನದಲ್ಲಿ ವರ್ಷಂಪ್ರತಿ ವಿಜೃಂಭಣೆಯಿಂದ ನಡೆಯುವ ಸಹಸ್ರ ಹೂವಿನ ಪೂಜೆ, ಸಹಸ್ರ ಕರ್ಪೂರಾರತಿ, ಶತಕಲಶಾಭಿಷೇಕ ಮತ್ತು ಸಾನಿಧ್ಯಹವನವನ್ನು ಶ್ರೀ ದೇವಿಯ ಸಾನಿಧ್ಯ ಅಭಿವೃದ್ದಿ ಹಾಗೂ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಜನವರಿ 6ರಂದು ಶುಕ್ರವಾರ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆಸಲಾಗುವುದು ಎಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ರಾಕೇಶ ಪ್ರಭು ಮತ್ತು ಪ್ರಧಾನ ತಂತ್ರಿಗಳಾದ ಪಂಡಿತ್ ಎಂ.ಕಾಶೀನಾಥ ಆಚಾರ್ಯ ತಿಳಿಸಿದ್ದಾರೆ.
ಬೆಳಗ್ಗೆ 8ಕ್ಕೆ ಪ್ರಾರ್ಥನೆ, 9.30ಕ್ಕೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಹಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಬ್ರಹ್ಮಕಲಶಾಭಿಷೇಕ, ಅಷ್ಟಮಂಗಲ, ನಿರೀಕ್ಷಣೆ, ಪ್ರಸನ್ನ ಪೂಜೆ, ಶ್ರೀದೇವರಿಗೆ ಪಟ್ಟ ಕಾಣಿಕೆ, ಮೂಲಮಂತ್ರ ಹವನ, ಸಾನಿಧ್ಯ ಹವನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸೇವಾದಾರರಿಗೆ ಪ್ರಸಾದ ಮತ್ತು ಸಮಾರಾಧನೆ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.