ಬಂಟ್ವಾಳ ತಾಲೂಕಿನ ಪೊಳಲಿ ಸರಕಾರಿ ಶಾಲಾ ಫ್ರೌಡ ಶಾಲಾ ವಾರ್ಷಿಕೋತ್ಸವವು ಡಿ.೧೭ರಂದು ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿ ಪಾಡಿ ವಹಿಸಿದ್ದರು.
ಪೊಳಲಿ ರಾಮಕ್ರಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೊಬೈಲ್ ದಾಸ್ಯ ದುಶ್ಚಟಗಳಿಂದ ಹೊರಬಂದು ಸ್ವಚ್ಛಾರಿತ್ರ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಎಸ್ ಎಲ್ ಭೋಜೇಗೌಡ ಅವರ ಪ್ರಾದೇಶಿಕ ಅಭಿವೃದ್ಧಿ ಅನುದಾನದಿಂದ ನೀಡಲ್ಪಟ್ಟ ಸೋಲಾರ್ ದೀಪದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಶಾಲಾ ಹೇಳಿಕಗೆಗಾಗಿ ಶ್ರಮಿಸುತ್ತಿರುವ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಇವರನ್ನು ಅಭಿನಂದಿಸಲಾಯಿತು
ಶಾಲಾ ಪ್ರಥಮ ಬ್ಯಾಚಿನ ವಿದ್ಯಾರ್ಥಿನಿ ಶ್ರೀಮತಿ ಅಸ್ಮ ಡೆಪ್ಯುಟಿ ಡೈರೆಕ್ಟರ್ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರನ್ನು ಸನ್ಮಾನಿಸಲಾಯಿತು. ಶಾಲಾ ನಿವೃತ್ತ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಗೀತಾ ಮತ್ತು ಶ್ರೀಮತಿ ಚಂದ್ರಾವತಿ ಅವರನ್ನು ಅಭಿನಂದಿಸಲಾಯಿತು.
ನಿಸ್ವಾರ್ಥಿಯಾಗಿ ತಾನು ಬೇಡಿದ ಭಿಕ್ಷೆಯನ್ನು ಸಾಮಾಜಿಕ ಒಳಿತಿಗಾಗಿ ವಿನಯೋಗಿಸುತ್ತಿರುವ ಶ್ರೀಮತಿ ಅಶ್ವತ್ಥಮ್ಮ ಇವರನ್ನು ಸನ್ಮಾನಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾವುಡ ಅಭಿನಂದನಾ ಭಾಷಣ ಗೈದರು. ಶಾಲಾ ಮುಖ್ಯಸ್ಥರಾದ ಶ್ರೀ ರಾಧಾಕೃಷ್ಣ ಭಟ್ ವರದಿ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಲೋಕೇಶ್ ಭರಣಿ , ಚಂದ್ರವತಿ , ಮುರಳಿ ಕೃಷ್ಣ ಪೊಳಲಿ, ರೊಟೇರಿಯನ್ ಪುಷ್ಪರಾಜ ಹೆಗ್ಡೆ, ಲಯನ್ ಉಮೇಶ್ ಆಚಾರ್ಯ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಭರಣಿ,ಚಂದ್ರಾವತಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶ್ರೀಮತಿ ಜಾನೆಟ್ ಲೋಬೊ ಸ್ವಾಗತಿಸಿ.ಮುರಳಿಧರ ಆಚಾರ್ಯ ಧನ್ಯ ವಾದ ವಿತ್ತರು.ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.ನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)