ಕರ್ನಾಟಕ ಕೇರಳ ಗಡಿಭಾಗವಾದ ಪದ್ಯಾಣದಲ್ಲಿರುವ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆಯಲ್ಲಿ 19 ವರ್ಷಗಳ ನಂತರ ಹಳೆ ವಿದ್ಯಾರ್ಥಿಗಳು, ಊರವರ ಸಹಕಾರದಿಂದ ವಾರ್ಷಿಕೋತ್ಸವ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನ್ವರ್ ಕರೋಪಾಡಿ, ಸರಕಾರಿ ಶಾಲೆಗಳ ಸಬಲೀಕರಣ ಅಗತ್ಯ ಎಂದರು.
ಕನ್ಯಾನ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಕೆ. ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೀಪ ಬೆಳಗಿಸಿ ನಿವೃತ್ತ ಮುಖ್ಯೋಪಾಧ್ಯಾಯ ಪದ್ಯಾಣ ತಿಮ್ಮಣ್ಣ ಭಟ್ ಚಾಲನೆ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಹಾಗೂ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಪೆರಿಯದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ ಪದ್ಯಾಣ ಶಾಲೆಯ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಗಡಿಜಾಗೆ, ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶಶಾಂಕ ಭಟ್ ಹಾಗೂ ಪ್ರಸನ್ನ ಪದ್ಯಾಣ ಉಪಸ್ಥಿತರಿದ್ದರು. ಶಾಲೆಯ ಹಳೆ ವಿದ್ಯಾರ್ಥಿ, ಕಾರ್ಗಿಲ್ ಯೋಧ ಗೋವಿಂದ ಪ್ರಸಾದ್, ಆಶಾ ಕಾರ್ಯಕರ್ತೆ ಆಶಾಲತಾ, ಸ್ಥಾಪಕ ಅಧ್ಯಾಪಕ ಪದ್ಯಾಣ ತಿಮ್ಮಣ್ಣ ಭಟ್, ಶಾಲೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕ ದಂಪತಿಗಳಾದ ಶಿವಪ್ಪ ಗೌಡ ಪದ್ಯಾಣ ಹಾಗೂ ಶೋಭಾವತಿ, ಶಾಲಾ ಮುಖ್ಯೋಪಾಧ್ಯಾಯರಾದ ಸಾವಿತ್ರಿ.ಕೆ, ಶಿಕ್ಷಕರಾದ ವೀಣಾ ಕುಮಾರಿ, ಅಂಗನವಾಡಿ ಶಿಕ್ಷಕರಾದ ಯಶೋಧಾ, ವಾರಿಜ, ಅಕ್ಷರ ದಾಸೋಹ ಸಹಾಯಕಿಯಾದ ಸೀತಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸಾವಿತ್ರಿ ಕೆ. ಸ್ವಾಗತಿಸಿ, ಸಹಶಿಕ್ಷಕಿ ವೀಣಾ ಕುಮಾರಿ ವಂದಿಸಿದರು. ಪ್ರತೀಕ್ಷಾ ಪದ್ಯಾಣ ಮತ್ತು ಖದೀಜತ್ ತಸ್ಲೀಮಾ ಕಾರ್ಯಕ್ರಮ ನಿರೂಪಿಸಿದರು.