ಇಲ್ಲಿವೆ ಸಂಪೂರ್ಣ ವಿವರ
ಬಂಟ್ವಾಳ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ವತಿಯಿಂದ ಹೋಟೆಲ್ ರಂಗೋಲಿ ಬಿ.ಸಿ.ರೋಡ್ ಆಶ್ರಯದಲ್ಲಿ ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಸಹಯೋಗದಲ್ಲಿ ರಜತಪರ್ವ ತಾಳಮದ್ದಳೆ ಸಪ್ತಾಹ ಜನವರಿ 4ರಿಂದ 10ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ಬಿ.ಸಿ.ರೋಡ್ ನ ಹೋಟೆಲ್ ರಂಗೋಲಿಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಉಜಿರೆ ಅಶೋಕ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.4ರಂದು ಅಂಗದ ಸಂಧಾನ ಪ್ರಸಂಗ ಇರಲಿದ್ದು, ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ ಶೆಟ್ಟಿ ಅಳಿಕೆ, ಬಿ.ಜನಾರ್ದನ ತೋಳ್ತಾಡಿತ್ತಾಯ, ನವೀನಚಂದ್ರ ಮೊಗರ್ನಾಡು, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಕೆ.ಗೋವಿಂದ ಭಟ್, ಉಜಿರೆ ಅಶೋಕ ಭಟ್ ಮತ್ತು ಕುಶಲ ಮುಡಿಪು ಭಾಗವಹಿಸುವರು .
ಜ.5ರಂದು ಶಿವಭಕ್ತ ವೀರಮಣಿ ಪ್ರಸಂಗದ ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚಂದ್ರಶೇಖರ ಭಟ್ ಕೊಂಕಣಾಜೆ, ಪದ್ಮನಾಭ ಉಪಾಧ್ಯಾಯ, ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ಸರ್ಪಂಗಳ ಈಶ್ವರ ಭಟ್, ಕೆ.ಮೋಹನ ರಾವ್, ಪ್ರಶಾಂತ್ ಹೊಳ್ಳ ಭಾಗವಹಿಸುವರು.
ಜ.6ರಂದು ಶುಕ್ರವಾರ ಸತ್ವಪರೀಕ್ಷೆ ಪ್ರಸಂಗ ಇರಲಿದ್ದು, ಮುಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್ ಆಜೇರು, ಪುರುಷೋತ್ತಮ ಭಟ್ ನಿಡುವಜೆ, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಗನ್ನಿವಾಸ ರಾವ್ ಪುತ್ತೂರು, ಮುಮ್ಮೇಳದಲ್ಲಿ ಕೆ.ಗೋವಿಂದ ಭಟ್, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ನಾ.ಕಾರಂತ ಪೆರಾಜೆ, ಕಿಶೋರ್ ಶೇಣವ ಸಜಿಪ ಭಾಗವಹಿಸುವರು.
ಜ.7ರಂದು ಪಂಚವಟಿ ಪ್ರಸಂಗದಲ್ಲಿ ಪುರುಷೋತ್ತಮ ಭಟ್ ನಿಡುವಜೆ, ವಿಶ್ವಾಸ ಭಟ್ ಕರ್ಬೆಟ್ಟು, ಎಂ.ಲಕ್ಷ್ಮೀಶ ಅಮ್ಮಣ್ಣಾಯ, ರಾಮಪ್ರಸಾದ ವಧ್ವ, ಶ್ರೀವತ್ಸ ಸೋಮಯಾಜಿ ಇರಲಿದ್ದು, ಮುಮ್ಮೇಳದಲ್ಲಿ ಕೆ.ಗೋವಿಂದ ಭಟ್, ಶಂಭು ಶರ್ಮ ವಿಟ್ಲ, ಪ್ರಶಾಂತ್ ಹೊಳ್ಳ ಬಿ.ಸಿ.ರೋಡ್, ಸಂಜೀವ ಶೆಟ್ಟಿ ಬೋಳಂತೂರುಗುತ್ತು, ಶಿವಕುಮಾರ ಗುತ್ತಿಗಾರು ಭಾಗವಹಿಸುವರು.
ಜ.8ರಂದು ಶ್ಯಮಂತಕಮಣಿ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ಉಜಿರೆ ಅಶೋಕ ಭಟ್, ಹರೀಶ ಬೊಳಂತಿಮೊಗರು, ಪಶುಪತಿ ಶಾಸ್ತ್ರಿ ಶಿರಂಕಲ್ಲು ಭಾಗವಹಿಸುವರು.
ಜ.9ರಂದು ಕದಂಬ ಕೌಶಿಕೆ ಪ್ರಸಂಗ ಇರಲಿದ್ದು, ಹಿಮ್ಮೇಳದಲ್ಲಿ ಪ್ರಶಾಂತ ರೈ ಮುಂಡಾಲಗುತ್ತು, ಪದ್ಯಾಣ ಶಂಕರನಾರಾಯಣ ಭಟ್, ಬಿ.ಜನಾರ್ದನ ತೋಳ್ಪಾಡಿತ್ತಾಯ, ಮುಮ್ಮೇಳದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್, ಗುಂಡ್ಯಡ್ಕ ಈಶ್ವರ ಭಟ್, ಪವನ್ ಕಿರಣ್ ಕೆರೆ, ಪ್ರಶಾಂತ್ ಹೊಳ್ಳ ಬಿ.ಸಿ.ರೋಡ್ ಮತ್ತು ಕುಶಲ ಮುಡಿಪು ಭಾಗವಹಿಸುವರು.
ಜ.10ರಂದು ಭೀಷ್ಮಪರ್ವ ಪ್ರಸಂಗ ಇರಲಿದ್ದು, ಹಿಮ್ಮೇಳದಲ್ಲಿ ಪಟ್ಲ ಸತೀಶ ಶೆಟ್ಟಿ, ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬಿ.ಜನಾರ್ದನ ತೋಳ್ಪಾಡಿತ್ತಾಯ, ಮುಮ್ಮೇಳದಲ್ಲಿ ಡಾ. ಎಂ.ಪ್ರಭಾಕರ ಜೋಷಿ, ಕೆ.ಗೋವಿಂದ ಭಟ್, ಉಜಿರೆ ಅಶೋಕ ಭಟ್, ಭಾಸ್ಕರ ಬಾರ್ಯ ಮತ್ತು ಸಂಜೀವ ಶೆಟ್ಟಿ ಬೋಳಂತೂರುಗುತ್ತು ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.