ಕಲ್ಲಡ್ಕ

ರಾ.ಹೆದ್ದಾರಿಯ ಮಾಣಿ ಜಂಕ್ಷನ್ ನಲ್ಲಿ ಮತ್ತೆ ಅಪಘಾತ: ಸಂಚಾರ ದಟ್ಟಣೆ, ಸಣ್ಣ ಅಪಘಾತಕ್ಕೂ ಟ್ರಾಫಿಕ್ ಜಾಮ್ ಸಮಸ್ಯೆ

ಭಾನುವಾರ ಬೆಳಗಿನ ಜಾವ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿ ವಾಹನದಟ್ಟಣೆ ಉಂಟಾಯಿತು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಸಾಗುವ ಸಂದರ್ಭ ಬೆಂಗಳೂರು ಮತ್ತು ಮೈಸೂರು ಕಡೆಗಳಿಗೆ ಹೋಗುವ ರಸ್ತೆ ಕವಲೊಡೆಯುವ ಜಾಗವಾದ ಮಾಣಿಯಲ್ಲಿ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾರ್ಯಗಳೂ ಸಾಗುತ್ತಿದ್ದು, ಸರ್ವೀಸ್ ರಸ್ತೆಯನ್ನು ಮಾಡದ ಕಾರಣ ಆಗಾಗ ವಾಹನ ಸವಾರರಲ್ಲಿ ಗೊಂದಲ ಉಂಟಾಗುತ್ತಿದೆ.

ಇಂದು ಬೆಳಗ್ಗೆ ಎರಡು ಲಾರಿಗಳು ಮಾಣಿ ಜಂಕ್ಷನ್ ನಲ್ಲಿ ಮಂಗಳೂರು ಕಡೆಗೆ ಹೋಗುವ ಸಂದರ್ಭ ಓವರ್ ಟೇಕ್ ಭರಾಟೆಯಲ್ಲಿ ಒಂದಕ್ಕೊಂದು ಒರೆಸಿಕೊಂಡವು. ಬೆಳಗ್ಗೆ ಸುಮಾರು 6.40ರ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ಸುಮಾರು 9 ಗಂಟೆವರೆಗೂ ಎರಡೂ ಬದಿಗಳಲ್ಲಿ ವಾಹನಗಳು ಸಂಚರಿಸಲು ಪರದಾಡಿದವು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts