ಬಂಟ್ವಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟಿನಲ್ಲಿರುವ ಬಿ.ಮೂಡ ಸರಕಾರಿ ಹೈಸ್ಕೂಲ್ ರಜತ ಸಂಭ್ರಮ, ವಾರ್ಷಿಕೋತ್ಸವ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಸರಕಾರಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಹಿತ ಸಮುದಾಯದ ಸಹಕಾರ ಸಿಕ್ಕರೆ ಶಾಲಾಭಿವೃದ್ಧಿ ಸಾಧ್ಯ ಎಂದರು. ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತದೆ ಎಂಬುದಕ್ಕೆ ಉನ್ನತ ಸ್ಥಾನಕ್ಕೇರಿದವರೇ ಸಾಕ್ಷಿ ಎಂದರು.
ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಿದರು. ಉದ್ಯಮಿ ಸದಾನಂದ ಶೆಟ್ಟಿ ರಂಗೋಲಿ ಅವರನ್ನು ಗೌರವಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ದೈಪಲ ಶುಭ ಹಾರೈಸಿದರು. ಪುರಸಭೆ ಸದಸ್ಯೆ ವಿದ್ಯಾವತಿ ಪ್ರಮೋದ್ ಕುಮಾರ್, ನಿವೃತ್ತ ಶಿಕ್ಷಕರಾದ ಸಂಕಪ್ಪ ಶೆಟ್ಟಿ, ಎಚ್.ಎನ್.ಹೆಬ್ಬಾರ್, ರೋಟರಿ ಟೌನ್ ಅಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಉದ್ಯಮಿಗಳಾದ ಐತಪ್ಪ ಆಳ್ವ, ಸಂಜೀವ ಶೆಟ್ಟಿ, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಹರೀಶ ಮಾಂಬಾಡಿ, ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳಾದ ಶೋಭಾ ಕೆ. ರವಿಚಂದ್ರ ಕುಲಾಲ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಗೀತಾ ಎ ವರದಿ ವಾಚಿಸಿದರು. ಶಿಕ್ಷಕರಾದ ರಮೇಶ್ ನಾಯಕ್, ಸುಬ್ರಹ್ಮಣ್ಯ ರಾವ್, ಸುಬ್ರಹ್ಮಣ್ಯ ಭಟ್, ವಾಣಿ, ವಿಜಯ ಕೆ, ಅನಿತಾ, ಪ್ರಪುಲ್ಲಾ, ಶಿವಪ್ರಸಾದ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.