ಬಂಟ್ವಾಳ

ಡಿ.18ರಂದು ಮುಡಿಪು ಭಾರತಿ ಶಾಲೆಯಲ್ಲಿ “ಜೀವ ರಕ್ಷಣಾ ಕೌಶಲ್ಯ” ಉಚಿತ ಕಾರ್ಯಾಗಾರ

ಜಾಹೀರಾತು

ಮುಡಿಪು ಶ್ರೀ ಭಾರತಿ ಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ ಜಗದೀಶ ಅಡಪ ಅವರ ನೇತೃತ್ವದಲ್ಲಿ ಕೌಟುಂಬಿಕ ಸುರಕ್ಷತೆಯ ಕುರಿತು ಮಾಹಿತಿ ನೀಡುವ ಕಾರ್ಯ ನಡೆಯಲಿದೆ.

“ಸುರಕ್ಷತೆಯ ಪಾಲನೆ ಜೀವನದ ಲಾಲನೆ: ಜೀವ ರಕ್ಷಣಾ ಕೌಶಲ್ಯ’ ಕಾರ್ಯಾಗಾರ ಡಿ.18ರಂದು ಆದಿತ್ಯವಾರ ಅಪರಾಹ್ನ 2.30ರಿಂದ ಸಂಜೆ 5.30ರ ತನಕ ಮುಡಿಪು ಭಾರತಿ ಶಾಲೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭಾರತಿ ಶಾಲೆಯ ಎಲ್ಲ ಹಳೆ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳ ಕುಟುಂಬದವರು, ಪೋಷಕರು, ಹಾಗೂ ಎಲ್ಲ ವಿದ್ಯಾಭಿಮಾನಿಗಳಿಗೆ ಪಾಲ್ಗೊಳ್ಳಲು ಅವಕಾಶ ಇದೆ. ನಿತ್ಯ ಬದುಕಿನಲ್ಲಿ ಎದುರಾಗುವ ಬೆಂಕಿ ಆಕಸ್ಮಿಕಗಳ ನಿರ್ವಹಣೆ, ಆರೋಗ್ಯ ಸಂಬಂಧಿ ಪ್ರಥಮ ಚಿಕಿತ್ಸೆಗಳು, ಮುಂಜಾಗ್ರತೆ, ಆತ್ಮವಿಶ್ವಾಸ ವೃದ್ಧಿಯಂತಹ ಜೀವನಾಶ್ಯಕ ವಿಚಾರಗಳ ಕುರಿತು ಪ್ರಾತ್ಯಾಕ್ಷಿಕೆ ಸಹಿತ ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. ಜೀವನ ರಕ್ಷಣಾ ಕೌಶಲ್ಯ ತರಬೇತಿದಾರರಾಗಿರುವ ಜಗದೀಶ ಅಡಪ ಅವರು ಚೆನ್ನೈಯಲ್ಲಿ ನೆಲೆಸಿದ್ದು, ಈ ತನಕ ನೂರಾರು ಇಂತಹ ಕಾರ್ಯಾಗಾರಗಳನ್ನು ಸಾಮಾಜಿಕ ಕಳಕಳಿಯಿಂದ ನಡೆಸಿಕೊಟ್ಟಿದ್ದು, ಅವರು ಚೆನ್ನೈಯ ಉಷಾ ಫೈರ್ ಸೆಫ್ಟಿ ಎಕ್ವಿಪ್ಮೆಂಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಡಿ.18ರಂದು ನಡೆಯುವ ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಭಾರತಿ ಶಾಲೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಹಾಗೂ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago