ಬಂಟ್ವಾಳ: ವಕೀಲರ ರಕ್ಷಣಾ ಕಾಯ್ದೆ ಮಸೂದೆಯನ್ನು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಿ ಅಂಗೀಕರಿಸುವಂತೆ ಒತ್ತಾಯಿಸಿ ಶನಿವಾರ ದ.ಕ ಜಿಲ್ಲಾ ಕಾನೂನು ವೇದಿಕೆ (ರಿ) ಬಂಟ್ವಾಳ ತಾಲೂಕು ಘಟಕದ ವತಿಯಿಂದ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಇಂದು ವಕೀಲರಿಗೆ ರಕ್ಷಣೆ ಇಲ್ಲದಂತಾಗಿದ್ದು ಹಲವಾರು ಸಂದರ್ಭಗಳಲ್ಲಿ ವಕೀಲರ ಮೇಲೆ ದಾಳಿಗಳಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ ಈ ನಿಟ್ಟಿನಲ್ಲಿ ಕೂಡಲೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ವಕೀಲರ ಆಗ್ರಹವಾಗಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಲ್ಲಾ ಕಾನೂನು ವೇದಿಕೆಯ ತಾಲೂಕು ಅಧ್ಯಕ್ಷರಾದ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಚಂದ್ರಶೇಖರ.ಕೆ.ವಿ, ಹಾತಿಮ್ ಅಹಮ್ಮದ್, ಚಂದ್ರಶೇಖರ ರಾವ್ ಪುಂಚಮೆ, ರಾಜಾರಾಮ್ ನಾಯಕ್, ಸುರೇಶ್ ಕುಮಾರ್ ನಾವೂರು, ಉಮಾಕರ್ ಬಂಗೇರ, ಮಹಮ್ಮದ್ ಕಬೀರ್ ಕೆಮ್ಮಾರ, ಉಮೇಶ್ ಕುಮಾರ್.ವೈ , ಅಬ್ದುಲ್ ರಹಿಮಾನ್, ರಿಚಾರ್ಡ್ ಡಿ ಕೋಸ್ತ, ಸತೀಶ್.ಬಿ, ಗಂಗಾಧರ್ ನಾಯಕ್, ಯುವ ವಕೀಲರಾದ ವೀರೇಂದ್ರ ಸಿದ್ದಕಟ್ಟೆ, ಮೋಹನ್ ಕುಮಾರ್ ಕಡೇಶ್ವಾಲ್ಯ, ಚಂದ್ರಶೇಖರ್ ಬೈರಿಕಟ್ಟೆ, ಅಬ್ದುಲ್ ಜಲೀಲ್.ಎನ್, ತುಳಸೀದಾಸ್ ವಿಟ್ಲ, ಮಹಮ್ಮದ್ ಅಶ್ರಫ್, ಸಾಯಿನಾಥ್ ಗೌಡ, ಲಕ್ಮೀನಾರಾಯಣ ಸಿದ್ದಕಟ್ಟೆ, ಮಹಮ್ಮದ್ ಮುಂಝಿರ್ ಮುಂತಾದವರು ಇದ್ದರು.