ಬಂಟ್ವಾಳ

ಬಂಟ್ವಾಳ ಲೊರೆಟ್ಟೊ ಚರ್ಚ್ ನಲ್ಲಿ ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬ

ಬಂಟ್ವಾಳ: ಬಂಟ್ವಾಳದ ಲೊರೆಟ್ಟೋ ಮಾತಾ ಚರ್ಚ್ ಪಾಲಕಿ ಮಾತೆ ಮರಿಯಮ್ಮನವರ ವಾರ್ಷಿಕ ಹಬ್ಬವನ್ನು ಸಂಭ್ರಮ ಸಡಗರ ಭಕ್ತಿಯಿಂದ ಆಚರಿಸಲಾಯಿತು.

“ಪ್ರೀತಿ, ಸೇವೆಯಲಿ ಜೊತೆಗೂಡಿ, ಕ್ರಿಸ್ತ ವಿಶ್ವಾಸಿ ಸಾಕ್ಷಿಗಳಾಗೋಣ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರಧಾನ ಧರ್ಮಗುರುಗಳಾದ ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ಮೂನ್ಸಿಂಜೊರ್ ವಂ ಮಾಕ್ಸಿಂ ನೊರೊನ್ಹಾ ಪ್ರವಚನ ನೀಡಿ ನೂರಾರು ಭಕ್ತಾದಿಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು.

ಮಾತೆ ಮರಿಯಮ್ಮನವರ ಚರಣಕ್ಕೆ ನೊವೆನಾ ಪ್ರಾರ್ಥನೆಯನ್ನು, ಬಲಿಪೂಜೆಯನ್ನು ಅರ್ಪಿಸಲಾಯಿತು.ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು .ಈ ಸಂದರ್ಭ ಹಬ್ಬವನ್ನು ಆಚರಿಸಲು ಸಹಕರಿಸಿದವರಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಲೊರೆಟ್ಟೊ  ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೆಸನ್ ಮೋನಿಸ್ , ಬಂಟ್ವಾಳ ವಲಯದ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.  ಚರ್ಚ್ ಪಾಲನಾ ಮಂಡಳಿ  ಸಂಭ್ರಮದ ಮೇಲುಸ್ತುವಾರಿಯನ್ನು ವಹಿಸಿತ್ತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ