ಬಂಟ್ವಾಳ: ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಕಲ್ಲಡ್ಕ, ಕೃಷಿ ಇಲಾಖೆ ಆಶ್ರಯದಲ್ಲಿ 2022-23ನೇ ಸಾಲಿನ ಸಾವಯವ ಸಿರಿ ಯೋಜನೆಯಡಿ ಸಾವಯವ ಕೃಷಿಯಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಕಲ್ಲಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಮಂಗಳವಾರ ನಡೆಯಿತು.
ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಆರೋಗ್ಯದೊಂದಿಗೆ ನೆಲ, ಜಲ ರಕ್ಷಣೆಗಾಗಿ ಸಾವವಯ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾವಯವ ಕೃಷಿ ಪರಿವಾರ ಮಾಜಿ ರಾಜ್ಯಾಧ್ಯಕ್ಷ ಆನಂದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಭಿಷೇಕ್ ಎನ್, ದ.ಕ.ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ, ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಪ್ರತಿನಿಧಿ ಆರ್. ಚೆನ್ನಪ್ಪ ಕೋಟ್ಯಾನ್, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು.
ಉಪಕೃಷಿ ನಿರ್ದೇಶಕಿ ಭಾರತಮ್ಮ ಜಿ.ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ವಂದಿಸಿದರು.
ಬಳಿಕ ನಡೆದ ತಾಂತ್ರಿಕ ಅಧಿವೇಶನದಲ್ಲಿ ಸಾವಯವ ಕೃಷಿ ಮತ್ತು ಸಾವಯವ ಉತ್ಪನ್ನಗಳ ಮಾರುಕಟ್ಟೆ ಕುರಿತು ವಾರಣಾಶಿ ಫಾರ್ಮ್ಸ್ ಅಡ್ಯನಡ್ಕದ ಡಾ ಅಶ್ವಿನಿ ಕೆ.ಮೂರ್ತಿ, ಗ್ರೇಡಿಂಗ್, ಕ್ಲೀನಿಂಗ್, ಪ್ಯಾಕಿಂಗ್, ದಾಸ್ತಾನು ಸಾಗಾಣಿಕೆ, ನೇರ ಮಾರುಕಟ್ಟೆ, ಸಾವಯವ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಧಾರವಾಡ ಕೃಷಿ ವಿವಿ ಕೃಷಿ ವ್ಯವಹಾರ ನಿರ್ವಹಣೆ ಪ್ರಾಧ್ಯಾಪಕ ಡಾ. ಜಿ.ಎಂ.ಹಿರೇಮಠ್, ಕೊಯ್ಲಿನೋತ್ತರ ತಂತ್ರಜ್ಞಾನ ಕುರಿತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ. ಫಸಲ್, ಸಾವಯವ ಪ್ರಮಾಣೀಕರಣ ಕುರಿತು ಇ.ಡಿ.ನಯನಾ, ಹೈನುಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಕುರಿತು ಅಭಿನಂದನ್, ಜೇನು ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ ಕುರಿತು ಹರೀಶ್ ಕೋಡ್ಲ ಮತ್ತು ತಿಮ್ಮಯ್ಯ ಮಾಹಿತಿ ನೀಡಿದರು.