ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ: ತುಳು ನಾಟಕ ಸ್ಪರ್ಧೆಗೆ ತಂಡಗಳನ್ನು ಆಹ್ವಾನಿಸಲಾಗಿದ್ದು, ಸಂಘದ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮೇಲ್ಮನೆ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಕಳೆದ 41 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ತುಳು ಭಾಷೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ೫ ನೇ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಫೆಬ್ರವರಿ 4, 2023 ರಿಂದ ಫೆಬ್ರವರಿ 10, 2023 ನೇ ತಾರೀಕಿನವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದೆ., ಭಾಗವಹಿಸುವ ತಂಡಗಳ ನೊಂದಾವಣೆಗೆ ಕೃತಿಗಳನ್ನು ಆಹ್ವಾನಿಸುತ್ತಿರುವುದಾಗಿ ಹೇಳಿದರು.
ಸ್ಪರ್ಧೆಯಲ್ಲಿ ೭ ನಾಟಕಗಳು ಭಾಗವಹಿಸಲು ಅವಕಾಶವಿದ್ದು, ಫೆ.೧೧ರಂದು ಸಮಾರೋಪ ನಡೆಯಲಿದೆ. ಅಶ್ಲೀಲತೆಯ ಸೋಂಕಿಲ್ಲದ ತುಳು ಸಾಮಾಜಿಕ ನಾಟಕಕ್ಕೆ ಆದ್ಯತೆ. ಜಾತಿ,ಧರ್ಮ, ದೈವಾರಾಧನೆಗೆ ನಿಂದನೆಗಳು ನಿಷಿದ್ದವಾಗಿರುತ್ತದೆ. ನಾಟಕದ ಅವಧಿ ಕನಿಷ್ಟ ೨:೧೫ ಗಂಟೆಯಾಗಿದ್ದು, ಗರಿಷ್ಟ ೨:೪೫ ಗಂಟೆಗಳಿಗೆ ಮೀರಬಾರದು. ಅವಽ ತಲುಪದ ಹಾಗೂ ಅವಽ ಮೀರಿದ ನಾಟಕಗಳು ಸ್ಪರ್ಧೆಯ ಯಾವುದೇ ಬಹುಮಾನಗಳಿಗೆ ಪರಿಗಣಿಸಲ್ಪಡುವುದಿಲ್ಲ ಮತ್ತು ಠೇವಣಿಯನ್ನು ಹಿಂದುರುಗಿಸಲಾಗುವುದಿಲ್ಲ. ಯಾವುದೇ ವಿಭಾಗದಲ್ಲಿ ಒಬ್ಬರಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವ ಅವಕಾಶ. ಪರಿಮಿತ ಧ್ವನಿ ಮತ್ತು ಬೆಳಕಿನೊಂದಿಗೆ ಮೂರು ಪರದೆಗಳನ್ನು(ರಸ್ತೆ, ಮನೆ, ನೀಲಿ ಪರದೆ, ಅಂಕದ ಪರದೆ) ಒದಗಿಸಲಾಗುವುದು. ಹೆಚ್ಚಿನ ಅಗತ್ಯತೆಗಳನ್ನು ಸ್ಪರ್ಧಾ ತಂಡವೇ ಪೂರೈಸಿಕೊಳ್ಳಬೇಕು. ಸ್ಪರ್ಧಾ ತಂಡಕ್ಕೆ ಆಂಶಿಕ ಪ್ರಯಾಣ ಭತ್ಯೆ 7,000 ರೂಗಳನ್ನು ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಗೊಂಡ ತಂಡವು 5 ಸಾವಿರ ರೂಗಳನ್ನು ಠೇವಣಿಯಾಗಿ ನೀಡತಕ್ಕದ್ದು, ಹಾಗೂ ನಾಟಕ ಸ್ಪರ್ಧಾ ಸಮಿತಿಯು ನೀಡುವ ದಿನಾಂಕದಂದು ತಮ್ಮ ನಾಟಕವನ್ನು ಪ್ರದರ್ಶಿಸಲು ಒಪ್ಪಿಕೊಳ್ಳತಕ್ಕದ್ದು. ಯಾವುದೇ ಬದಲಾವಣೆ ಅಥವಾ ನಾಟಕ ಹಿಂತೆಗೆದುಕೊಂಡಲ್ಲಿ ಠೇವಣಿ ಮೊತ್ತ ಹಿಂತಿರುಗಿಸಲಾಗುವುದಿಲ್ಲ. ಈಗಾಗಲೇ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಬಹುಮಾನ ವಿಜೇತ ನಾಟಕಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದರು.
ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಪದಾಧಿಕಾರಿಗಳಾದ ಮಂಜಪ್ಪ ಮೂಲ್ಯ, ಗಿರೀಶ್ ಮೂಲ್ಯ ಅನಿಲಡೆ, ಚಂದ್ರಶೇಖರ ಶೆಟ್ಟಿಗಾರ್, ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಬಹುಮಾನಗಳ ವಿವರ: ಶ್ರೇಷ್ಠ ನಾಟಕ ಪ್ರಥಮ: 33 ಸಾವಿರ ರೂ., ದ್ವಿತೀಯ: 22 ಸಾವಿರ ರೂ. ,ತೃತೀಯ: 15 ಸಾವಿರ ರೂ. , ಶ್ರೇಷ್ಠ ನಟ, ನಟಿ,ಹಾಸ್ಯ ನಟ,ನಟಿ,ಪೋಷಕ ನಟ, ನಟಿ,ಸಂಗೀತ, ನಿರ್ದೆಶನ,ರಂಗ ವಿನ್ಯಾಸ, ಪ್ರಸಾದನ, ಅತ್ಯುತ್ತಮ ಬೆಳಕು ಸಂಯೋಜನೆ, ಈ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು.ತೀರ್ಪುಗಾರರ ವಿಶೇಷ ಬಹುಮಾನವಿದೆ. ನಾಟಕ ಸ್ಪರ್ಧಾ ಸಮಿತಿಯ, ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಡಿ.31 ರ ಮುಂಚಿತವಾಗಿ ಕೃತಿಗಳನ್ನು ಕಳುಹಿಸಬೇಕು. ಕೃತಿ ಕಳುಹಿಸಬೇಕಾದ ವಿಳಾಸ:
ಅಧ್ಯಕ್ಷರು, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ರಿ.ಪುಂಜಾಲಕಟ್ಟೆ, ಪಿಲಾತಬೆಟ್ಟು ಗ್ರಾಮ, ಅಂಚೆ ಪುಂಜಾಲಕಟ್ಟೆ, ಬಂಟ್ವಾಳ ತಾ.
ಅಥವಾ ಸುರಕ್ಷಾ ಮೆಡಿಕಲ್ಸ್, ಅಂಚನ್ ಕಾಂಪ್ಲೆಕ್ಸ್, ಪುಂಜಾಲಕಟ್ಟೆ ಅಂಚೆ ಪುಂಜಾಲಕಟ್ಟೆ. ಸಂಪರ್ಕ: ಮೊ.ನಂ. : ೯೪೮೨೦೯೬೦೬೩, ೯೪೪೯೧೮೯೫೦೬, ೯೭೪೦೩೨೪೮೬೨