ಬಂಟ್ವಾಳ: ಕಟೀಲು ಐದನೇ ಮೇಳದ ಚೌಕಿ ಸಹಾಯಕರಾಗಿದ್ದ ಅಚ್ಯುತ ನಾಯಕ್ (45) ಸೋಮವಾರ ಬಂಟ್ವಾಳ ತಾಲೂಕಿನ ಮೊಡಂಕಾಪು ಸಮೀಪ ನಡೆದ ಬಯಲಾಟದ ಬಳಿಕ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರು ಮಣಿನಾಲ್ಕೂರು ಬಳಿಯ ಕೊಡಂಗೆ ನಿವಾಸಿ. ಆಟ ಮುಗಿದ ಬಳಿಕ ಪರಿಕರಗಳನ್ನು ವಾಹನಕ್ಕೆ ಲೋಡ್ ಮಾಡುವ ಸಂದರ್ಭದಲ್ಲಿ ಅಸೌಖ್ಯಕ್ಕೀಡಾದ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವು ಸಂಭವಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)