ಬಂಟ್ವಾಳ: ಸೋಮವಾರ ಬೆಳಗ್ಗೆ ಬ್ರಹ್ಮರಕೂಟ್ಲು ಸಮೀಪ ತಲಪಾಡಿ ಎಂಬಲ್ಲಿ ಹಿಟ್ ಅಂಡ್ ರನ್ ಪ್ರಕರಣವೊಂದರಲ್ಲಿ ಆಟೊವೊಂದು ಪಲ್ಟಿಯಾದ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೊ ಚಾಲಕ ಮೂಡನಡುಗೋಡು ನಿವಾಸಿ ಪುರುಷೋತ್ತಮ (45) ಮತ್ತು ಪ್ರಯಾಣಿಕರಾದ ಹೃತಿಕ್ ಗಾಯಗೊಂಡಿದ್ದಾರೆ.
ಪ್ರಯಾಣಿಕರಾದ ಹೃತಿಕ ಎಂಬವರನ್ನು ಕರೆದುಕೊಂಡು ಮಂಗಳೂರು ಕಡೆಗೆ ಹೋಗುತ್ತಿದ್ದ ಸಂದರ್ಭ ಬೆಳಿಗ್ಗೆ 8 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ತಲಪಾಡಿ ಬಸ್ಸ್ ನಿಲ್ದಾಣದ ಬಳಿ ತಲುಪಿದಾಗ ಹಿಂದಿನಿಂದ ಅಂದರೆ ಬಿ ಸಿ ರೋಡು ಕಡೆಯಿಂದ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಆಟೋರಿಕ್ಷಾ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ಆಟೋರಿಕ್ಷಾ ಚಾಲಕ ಪುರುಷೋತ್ತಮ್ ಅವರಿಗೆ ಹಣೆಗೆ, ಎಡ ಭಾಗ ಕೆನ್ನೆಗೆ, ಗಲ್ಲಕ್ಕೆ, ಮೆಲ್ತುಟಿಗೆ, ಬಲಭಾಗ ಭುಜಕ್ಕೆ ಗುದ್ದಿದ ಗಾಯ ಮತ್ತು ತರಚಿರ ಗಾಯ ಹಾಗೂ ಪ್ರಯಾಣಿಕರಾದ ಹೃತಿಕ ಎಂಬವರಿಗೆ ಹಿಂಬದಿ ತಲೆಗೆ ಗುದ್ದಿದ ರಕ್ತ ಗಾಯ, ಬಲ ಮತ್ತು ಎಡ ಕೈಗಳಲ್ಲಿ ತರಚಿದ ಗಾಯವಾಗಿದ್ದು ಬಳಿಕ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಬ್ಬರು ಒಳ ರೋಗಿಯಾಗಿ ದಾಖಲಿಸಲಾಯಿತು. ಅಪಘಾತಪಡಿಸಿದ ಕಾರು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿರುವುದಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 152/2022 ಕಲಂ: 279, 337, ಐಪಿಸಿ 134 (ಎ ಮತ್ತು ಬಿ),187 ಐ ಎಮ್ ವಿ ಯಂತೆ ಪ್ರಕರಣ ದಾಖಲಾಗಿದೆ.