ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕದಲ್ಲಿ 17ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ . ಕಲ್ಲಡ್ಕ ಪ್ರಭಾಕರ ಭಟ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಶ್ರಯದಲ್ಲಿ ನಡೆಯುವ ಮೇಳದಲ್ಲಿ 50ಕ್ಕೂ ಅಧಿಕ ಖಾಸಗಿ ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದ್ದು, 30ಕ್ಕೂ ಹೆಚ್ಚಿನ ಕಂಪನಿಗಳು ನೋಂದಾಯಿಸಿವೆ. ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿರುವ ಈ ಮೇಳದಲ್ಲಿ ರಾಜ್ಯ ರಸ್ತೆ ಸಂಚಾರ ನಿಗಮದವರು ವಸತಿಸಹಿತ ಉಚಿತ ಲಘು ವಾಹನ ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದರೆ, ಔಷಧ, ಸಾಫ್ಟ್ ವೇರ್, ಬ್ಯಾಂಕ್, ವಾಹನ ಶೋರೂಂ ಸಹಿತ ವಿವಿಧ ಕಂಪನಿಗಳು ಫಾರ್ಮಸಿಸ್ಟ್, ನರ್ಸ್, ಹೌಸ್ ಮೇಡ್, ಅಕೌಂಟ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಕನ್ಸಲ್ಟೆಂಟ್, ಟೆಕ್ನಿಕಲ್ ಇಂಜಿನಿಯರ್ ಸಹಿತ ಡಿಪ್ಲೊಮಾ, ಪಿಯುಸಿ, ಐಟಿಐ, ಎಸ್ಸೆಸ್ಸೆಲಲ್ಸಿ, ಪಿಯುಸಿ, ತಾಂತ್ರಿಕ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸಂದರ್ಶನ ನಡೆಸಲಿವೆ. ಹೆಚ್ಚಿನ ಮಾಹಿತಿಗೆ 9731898289 ಮತ್ತು 8105464769 ನಂಬರ್ ಗಳನ್ನು ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ, ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ ಕಾಯರಕಟ್ಟೆ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ದಯಾನಂದ ಉಪಸ್ಥಿತರಿದ್ದರು.