ಬಂಟ್ವಾಳ: ದಶಮ ಸಂಭ್ರಮದಲ್ಲಿರುವ ಇಲ್ಲಿನ ನರಿಕೊಂಬು ಶ್ರೀ ಮಹಾಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಕಲಾರಾಧನೆ ಡಿ.2ರಂದು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ ಎಂದು ಕೇಂದ್ರದ ಅಧ್ಯಕ್ಷ ಕೃಷ್ಣರಾಜ ಭಟ್ ಕರ್ಬೆಟ್ಟು ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಟಿ. ತಿಳಿಸಿದ್ದಾರೆ. ಅಬ್ಬಯಮಜಲು ಶ್ರೀ ಮಹಮ್ಮಾಯಿ ಸನ್ನಿಧಿಯಲ್ಲಿ ಶುಕ್ರವಾರ ಸಂಜೆ ಕಾರ್ಯಕ್ರಮ ಆರಂಭಗೊಂಡಿದ್ದು, ತಾಳಮದ್ದಳೆ ನಡೆಯಿತು.
ನರಿಕೊಂಬು ಶ್ರೀ ಲಕ್ಷ್ಮೀನರಸಿಂಹ ದೇವಳದ ಅನ್ನಪೂರ್ಣ ಸಭಾಭವನದಲ್ಲಿ ಶನಿವಾರ ಮಧ್ಯಾಹ್ನ ಯಕ್ಷಾರಾಧನೆಯನ್ನು ಬಂಟ್ವಾಳ ತಹಸೀಲ್ದಾರ್ ಡಾ. ಸ್ಮಿತಾ ರಾಮು ಉಪಸ್ಥಿತಿಯಲ್ಲಿ ಮೊಗರ್ನಾಡು ದೇಗುಲದ ಮೊಕ್ತೇಸರ ವೇ.ಮೂ.ಜನಾರ್ದನ ವಾಸುದೇವ ಭಟ್ ಉದ್ಘಾಟಿಸಲಿದ್ದಾರೆ.
ಬಳಿಕ ಕೇಂದ್ರದ ಮಹಿಳಾ ತಂಡದವರಿಂದ ತಾಳಮದ್ದಲೆ ಮತ್ತು ಕೀರ್ತನ ಸಂಗೀತ ಶಾಲೆಯ ಹಿರಿಯ ಕಲಾವಿದರಿಂದ ಸಂಗೀತಾರಾಧನೆ, ಸ್ಥಳೀಯ ಪ್ರತಿಭೆಗಳಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಲಿದೆ
ಭಾನುವಾರ ಇದೇ ಸಭಾಭವನದಲ್ಲಿ ನಡೆಯಲಿರುವ ಯಕ್ಷಾರಾಧನೆಯ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬಂಟ್ವಾಳದ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಭಾಗವಹಿಸುವರು. ಬಳಿಕ ಕೇಂದ್ರದ ಯುವ ಪ್ರತಿಭೆಗಳಿಂದ ಶ್ರೀವತ್ಸ ಎಸ್. ಆರ್. ನಿರ್ದೇಶನದಲ್ಲಿ ರತಿ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.