ನಮ್ಮೂರು

ಬಸಳೆ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡವರು

  • ರಾಜೇಂದ್ರ ಕುಮಾರ್ ಎಂ.ಜಕ್ರಿಬೆಟ್ಟು ಬಂಟ್ವಾಳ

 ಬಂಟ್ವಾಳ ತಾಲೂಕು ನಾವೂರ ಗ್ರಾಮದ ಮೈಂದಾಲ ಎಂಬಲ್ಲಿ ತಾರಾನಾಥ ಕುಲಾಲ್ ಎಂಬವರು ಸಾವಯವ ರೀತಿಯಲ್ಲಿ ದೊಡ್ಡಮಟ್ಟದ ಬಸಳೆ ಕೃಷಿಯನ್ನು ಮಾಡಿ ಆರ್ಥಿಕವಾಗಿ ಪ್ರಗತಿ ಹೊಂದಿದ ಯಶೋಗಾಥೆ ಇದು.

ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಭೂಮಿಯನ್ನು ಸಾವಯವ ರೀತಿಯಲ್ಲಿ ಸಮೃದ್ಧವಾಗಿ ಅಭಿವೃದ್ಧಿಪಡಿಸಿದ ಕುಲಾಲರು ತಮ್ಮ ತೋಟದಲ್ಲಿ      ತೊಂಡೆ ಕಾಯಿ, ಬದನೆ ,ತೆಂಗು ,ಅಡಿಕೆ ,ಬಾಳೆ ಹಾಗೂ ಇತರ ಹಣ್ಣುಗಳನ್ನು ಬೆಳೆಸಿದ್ದಾರೆ .

ಬಸಳೆಗಾಗಿ ಮಣ್ಣುನ್ನು ಅದಗೊಳಿಸಿ ಅದಕ್ಕೆ ಸುಣ್ಣವನ್ನು ಸೇರಿಸಿ ಕೆಲವು ದಿನಗಳ ನಂತರ ರೋಗ ರಹಿತ ಬಸಳೆ ಗಿಡ ನಾಟಿ ಮಾಡಿ ಅದಕ್ಕೆ ಅಡಿಕೆಯ ಸಲಕೆ ಚಪ್ಪರವನ್ನು ಬಾರಿ ಚಂದವಾಗಿ ಮಾಡಿದ್ದಾರೆ. ತಾವೇ ತಯಾರಿಸಿದ ಜೀವಾಮೃತವನ್ನು ವಾರಕ್ಕೆ ಒಮ್ಮೆ ಕೊಡುತ್ತಾರೆ. ಕೊಟ್ಟಿಗೆ ಗೊಬ್ಬರ ಹಾಗೂ ಹರಳೆಣ್ಣೆ ಹಿಂಡಿಯನ್ನು ಹಿತಮಿತವಾಗಿ ಕೊಡುತ್ತಾರೆ.

ತಮ್ಮ ಕೃಷಿ ಭೂಮಿಯು ನೇತ್ರಾವತಿ ನದಿ ತೀರದಲ್ಲಿ ಇರುವುದರಿಂದ ನದಿಯಲ್ಲಿ ಬೆಳೆಯುವ ಬಡ ಗಿಡವನ್ನು ಕತ್ತರಿಸಿ ಇದರ ಬುಡಕ್ಕೆ ಹಾಕುತ್ತಾರೆ . ಇದರಿಂದ ರೋಗ ನಿರೋಧಕ ಶಕ್ತಿ ವಿಶೇಷ ರುಚಿ ಬಸಳೆಗೆ ಬರುತ್ತದೆ ಎಂದು ತಾವೇ ಕಂಡುಕೊಂಡಿದ್ದಾರೆ.

ಇದರೊಂದಿಗೆ ಮಲ್ಲಿಗೆ ಕೃಷಿಯುನ್ನು ತಮ್ಮ ಧರ್ಮಪತ್ನಿ ತುಳಸಿ ಇವರಿಗೆ ಸಹಕರಿಸುತ್ತಾರೆ. ನೋಡಿಕೊಳ್ಳುತ್ತಿದ್ದಾರೆ. ಕೃಷಿಗೆ ಪೂರಕವಾದ ಹೈನುಗಾರಿಕೆ ಇವರಲ್ಲಿದೆ. ಐದಾರು ಹಸುಗಳು ಅದನ್ನು ಸಾಕಿ ಡೈರಿಗೆ ಹಾಲನ್ನು ಹಾಕುತ್ತಾರೆ. ತಮಗೆ ಬೇಕಾದ ಜೀವಾಮೃತಕ್ಕೆ ಗಂಜಲದ ಇದರಿಂದ ಪಡೆಯುತ್ತಾರೆ. ಪತ್ನಿ ಹಾಗು ಇಬ್ಬರು ಮಕ್ಕಳು ಹಾಗೂ ತಮ್ಮ ತಾಯಿಯೊಂದಿಗೆ ಜೀವನ .

ಬೆಳಿಗ್ಗೆ ಐದು ಗಂಟೆಗೆ ಎದ್ದು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಾಯಂಕಾಲ 7:00 ಗಂಟೆಯ ಸುಮಾರಿಗೆ ತಮ್ಮ ಕೆಲಸ ಮುಗಿಯುತ್ತದೆ. ಕಠಿಣ ಪರಿಶ್ರಮ ಕೃಷಿಯಲ್ಲಿ ಸಾಧನ ಮಾಡಬೇಕೆಂಬ ಛಲ ತಾರಾನಾಥ ಕುಲಾರರನ್ನು ಮಾದರಿ ರೈತನನ್ನಾಗಿ ಮಾಡಿದೆ. ತಮ್ಮ ಸಾವಯವ ಬಸಳೆಗೆ ರುಚಿಗೆ ಮನಸೋತ ಗ್ರಾಹಕರು ಮನೆಗೆ ಬಂದು ಕೊಂಡು  ಹೋಗುತ್ತಾರೆ ಅಲ್ಲದೆ ಬಂಟ್ವಾಳ ಪಟ್ಟಣದ ಹಲವು ಅಂಗಡಿಗಳು ಬಸಳೆಗಾಗಿ ಬಾರಿ ಬೇಡಿಕೆ ಇಟ್ಟಿವೆ.   ಮಣ್ಣಿಗೆ ರಾಸಾಯನಿಕ ವಿಷಉಣಿಸದೆ ಮಣ್ಣಿನ ಫಲವತ್ತತೆ ಹಾಗೂ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಈ ರೀತಿಯ ಕ್ರಷಿ ಕ್ರಮ ಸರ್ವರಿಗೂ ಮಾದರಿ. 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts