ಧಾರ್ಮಿಕ ದತ್ತಿ ಇಲಾಖೆಯ ಎ ಗ್ರೇಡ್ ದೇವಸ್ಥಾನವಾಗಿರುವ ಬಂಟ್ವಾಳ ತಾಲೂಕಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಸನ್ನಿಧಿಯಲ್ಲಿ 2023ರ ಜನವರಿ 29ರಿಂದ ಫೆ.3ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದಲ್ಲಿ ಸೋಮವಾರ ಸಂಜೆ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, 2 ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ಊರ, ಪರವೂರ ಭಕ್ತರ ಸಹಕಾರದಿಂದ ಈ ಕಾರ್ಯ ನಡೆಯಲಿದ್ದು, ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥಮಂಟಪಗಳ ತಾಮ್ರದ ಹೊದಿಕೆ, ಸುತ್ತುಪೌಳಿ ದುರಸ್ತಿ ಮತ್ತು ಅಗತ್ಯ ವ್ಯವಸ್ಥೆ ನಿರ್ಮಾಣ, ಒಳಾಂಗಣದ ನೆಲದ ಸಂಪೂರ್ಣ ದುರಸ್ತಿ. ಮತ್ತು ನೂತನ ರಥ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ನಂದಾವರ ಕ್ಷೇತ್ರ ಭಕ್ತರ ನಂಬಿಕೆಯ ತಾಣವಾಗಿದ್ದು, ಇಲ್ಲಿಯ ಅಪ್ಪದ ಸೇವೆ ಜನಪ್ರಿಯವಾಗಿದೆ. ಶಂಕರನಾರಾಯಣ, ದುರ್ಗಾಂಬಾ ಮತ್ತು ವಿನಾಯಕ ಸನ್ನಿಧಿಯುಳ್ಳ ಈ ದೇವಸ್ಥಾನಕ್ಕೆ ದೇಶವಿದೇಶಗಳ ಭಕ್ತರು ಆಗಮಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ ರಾವ್ ನೂಯಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ವಿಶ್ವನಾಥ ಆಳ್ವ, ಪ್ರಧಾನ ಅರ್ಚಕ ವೇ.ಮೂ.ಮಹೇಶ ಭಟ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮಪ್ರಸಾದ್ ಪೂಂಜ, ಪದಾಧಿಕಾರಿಗಳಾದ ಜಯಶಂಕರ ಬಾಸ್ರಿತ್ತಾಯ, ಯಶವಂತ ದೇರಾಜೆ, ದಾಮೋದರ ಬಿ.ಎಂ ಮಾರ್ನಬೈಲು, ಅರುಣ್ ಕುಮಾರ್ ಕುಕ್ಕುದಕಟ್ಟೆ, ಮೋಹನದಾಸ ಹೆಗ್ಡೆ, ಸಚಿನ್ ಮೆಲ್ಕಾರ್, ಗಣೇಶ್ ಕಾರಾಜೆ, ಲೋಹಿತ್ ಪಣೋಲಿಬೈಲ್, ದೇವಪ್ಪ ನಾಯ್ಕ, ಜಯಶ್ರೀ ಅಶೋಕ್ ಗಟ್ಟಿ,ಭಕ್ತಕುಮಾರ ಶೆಟ್ಟಿ ಮಾಡಂತಾಡಿ, ಭಾಸ್ಕರ ಕಂಪದಕೋಡಿ, ರಾಮಕೃಷ್ಣ ಭಂಡಾರಿ, ಯಕ್ಷಿತ್ ಕುಲಾಲ್ ಉಪಸ್ಥಿತರಿದ್ದರು.