ವಾಮದಪದವು

ಇರ್ವತ್ತೂರು ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ಪ್ರಿಯದರ್ಶಿನಿ ಟ್ರೋಫಿ ಕಬಡ್ಡಿ ಪಂದ್ಯಾಟ 19ರಂದು

ಸುದ್ದಿಗೋಷ್ಠಿಯಲ್ಲಿ ನಿಶ್ಚಿತ್ ಶೆಟ್ಟಿ ಮಾತನಾಡಿದರು.

ಬಂಟ್ವಾಳ: ಇರ್ವತ್ತೂರು ವಲಯ ಕಾಂಗ್ರೆಸ್ ವತಿಯಿಂದ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ 65 ಕೆ.ಜಿ. ವಿಭಾಗದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಪ್ರಿಯದರ್ಶಿನಿ ಟ್ರೋಫಿ ಇರ್ವತ್ತೂರಿನ ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ನ.19ರಂದು ನಡೆಯಲಿದೆ.

ಈ ವಿಷಯವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಇರ್ವತ್ತೂರುಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಜೈನ್,  ಜಿಲ್ಲಾ ಜಾಲತಾಣ ವಿಭಾಗ ಉಪಾಧ್ಯಕ್ಷ ಪದ್ಮನಾಭ ಸಾವಂತ್ ಮತ್ತು ಆಯೋಜಕ ನಿಶ್ಚಿತ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 11ರಿಂದ ಸ್ಥಳೀಯ ಪ್ರೌಢಶಾಲಾ ವಿಭಾಗದ ಬಾಲಕರ ಕಬಡ್ಡಿ ಪಂದ್ಯಾಟವಿದ್ದರೆ, (ಇದಕ್ಕೆ ಉಚಿತ ಪ್ರವೇಶ) ಸಂಜೆ 65 ಕೆಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ (ಇದಕ್ಕೆ 1000 ರೂ ಪ್ರವೇಶಶುಲ್ಕ) ಇರಲಿದೆ. ಬೆಳಗ್ಗೆ 10 ಗಂಟೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಕೂಟವನ್ನು ಉದ್ಘಾಟಿಸುವರು. ಸಂಜೆ ನಡೆಯುವ ಸಮಾರೋಪದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸಹಿತ ಅನೇಕ ಗಣ್ಯರು ಭಾಗವಹಿಸುವರು.  ಪ್ರೌಢಶಾಲಾ ವಿಭಾಗದ ಪ್ರಥಮ ಬಹುಮಾನ 2022 ರೂ, ದ್ವಿತೀಯ 1022 ಇದ್ದರೆ, 65 ಕೆಜಿ ವಿಭಾಗದವರಿಗೆ ಟ್ರೋಫಿಯೊಂದಿಗೆ 25,555 ರೂ ಪ್ರಥಮ, 15555 ರೂ ದ್ವಿತೀಯ ಮತ್ತು 5555 ರೂ ತೃತೀಯ ಮತ್ತು ಚತುರ್ಥ ಬಹುಮಾನ ಪಡೆದವರಿಗೆ ನೀಡಲಾಗುವುದು ಎಂದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ